Nov 21, 2021, 2:49 PM IST
ಬೆಂಗಳೂರು (ನ. 21): ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ (Untimely Rain) ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲೆಡೆ ಅಪಾರ ಬೆಳೆ ನಷ್ಟ, ಜನ ಜೀವನ ಅಸ್ತವ್ಯಸ್ತ. ಜನಸಾಮಾನ್ಯರ ಮಾತು ಬಿಡಿ, ಸರ್ವಶಕ್ತನಾದ ಪರಮಾತ್ಮನಿಗೆ ಜಲ ದಿಗ್ಭಂಧನ ಹಾಕಿದೆ. ತಿರುಪತಿ ತಿಮ್ಮಪ್ಪನ ಪ್ರಾಂಗಣದಲ್ಲಿ ನೀರು ನಿಂತಿರುವುದನ್ನು ನಾವೆಲ್ಲಾ ನೋಡಿದ್ದೇವೆ.
ಬಂಗಾಳ ಕೊಲ್ಲಿಯಲ್ಲಿ ಆದ ವಾಯುಭಾರ ಕುಸಿತವೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ. 10 ವರ್ಷಗಳಲ್ಲಿ 40 ಚಂಡಮಾರುತಗಳನ್ನು ಕಂಡಿದ್ದೇವೆ. ಅಕ್ಟೋಬರ್‌ನಿಂದ ಡಿಸಂಬರ್‌ನಲ್ಲಿ ಚಂಡಮಾರುತ ಏಳುವುದು ಜಾಸ್ತಿ. ಹಾಗಾದರೆ ಸೈಕ್ಲೊನ್‌ಗಳು ಹೆಚ್ಚಾಗುತ್ತಿರೋದ್ಯಾಕೆ..?