Oct 23, 2024, 11:12 PM IST
ಬೆಂಗಳೂರು (ಅ.23): ರಷ್ಯಾದಲ್ಲಿ ಭಾರತ ಚೀನಾ ಮಧ್ಯೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಐದು ವರ್ಷದ ಬಳಿಕ ಮೋದಿ, ಜಿನ್‌ಪಿಂಗ್‌ಮುಖಾಮುಖಿಯಾಗಿದ್ದಾರೆ. ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ನಿಮ್ಮ ಭೇಟಿಯಿಂದ ತುಂಬಾ ಸಂತೋಷವಾಗಿದೆ. 5 ವರ್ಷಗಳ ಬಳಿಕ ಮೊದಲ ಬಾರಿಗೆ ಔಪಚಾರಿಕ ಸಭೆ ನಡೆಯುತ್ತಿದೆ. ಭಾರತ-ಚೀನಾ ಸಂಬಂಧ ನಮ್ಮ ಜನರಿಗೆ ಅಷ್ಟೇ ಮುಖ್ಯವಲ್ಲ. ಜಾಗತಿಕವಾಗಿಯೂ ಮುಖ್ಯ ಎಂದು ನಂಬುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
1.15 ಕೋಟಿಯ ಚಿನ್ನ, 12 ಕೋಟಿ ಆಸ್ತಿ, ಶಿಮ್ಲಾದಲ್ಲಿ ಬಂಗಲೆ: ಇದು ಪ್ರಿಯಾಂಕಾ ವಾದ್ರಾ ಆಸ್ತಿ
ಶಾಂತಿ, ಸ್ಥಿರತೆ, ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಗಡಿಯಲ್ಲಿ ಕಳೆದ 4 ವರ್ಷಗಳಿಂದ ಉದ್ಭವಿಸಿದ ಸಮಸ್ಯೆ, ಬಗೆಹರಿಸಿಕೊಳ್ಳಲು ಒಮ್ಮತದ ಸಹಕಾರವನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ-ಸ್ಥಿರತೆ ಕಾಪಾಡಿಕೊಳ್ಳಲು ಬಯಸ್ತೇವೆ ಎಂದು ಹೇಳಿದ್ದಾರೆ.