ಇಂದು ಲಕ್ಷದ್ವೀಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್‌ಗೆ ಉರಿದುಕೊಂಡಿರುವ ಇದೇ ಮಾಲ್ಡೀವ್ಸ್ ದೇಶವನ್ನು ಹಿಂದೊಮ್ಮೆ ಅಪಾಯದಿಂದ ಕಾಪಾಡಿದ್ದು ಇದೇ ಭಾರತ.
ಬೆಂಗಳೂರು (ಜ.8): ಭಾರತದ ಕುರಿತಾಗಿ ಮಾಲ್ಡೀವ್ಸ್ ದೇಶದ ಮೂವರು ಸಚಿವರುಗಳು ಆಡಿರುವ ಮಾತಿಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬಾಯ್ಕಾಟ್ ಮಾಲ್ಡೀವ್ಸ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಇದರ ನಡುವೆ ಭಾರತೀಯರು, ನಿಮ್ಮ ಪುಟ್ಟ ರಾಷ್ಟ್ರವನ್ನು ಕಾಪಾಡಿದ್ದೇ ಭಾರತ ಎಂದು ಅವರಿಗೆ ನೆನಪಿಸಿದ್ದಾರೆ.
1988ರ ನವೆಂಬರ್‌ನಲ್ಲಿ ಭಾರತದಿಂದ ಆಪರೇಷನ್ ಕ್ಯಾಕ್ಟಸ್ ಆರಂಭವಾಗಿತ್ತು. ತಮಿಳು ಉಗ್ರರು ಮಾಲ್ಡೀವ್ಸ್ ದೇಶವನ್ನು ವಶಪಡಿಸಿಕೊಂಡಿದ್ದರು. ಅಂದು ನೆರವಿಗಾಗಿ ಮಾಲ್ಡೀವ್ಸ್ ಭಾರತದ ಬಳಿ ಮನವಿ ಮಾಡಿತ್ತು. ನೆರವು ಕೇಳಿದ 9 ಗಂಟೆಗಳಲ್ಲೇ ಆಪರೇಷನ್ ಶುರು ಮಾಡಿದ್ದ ಭಾರತ, 18 ಗಂಟೆಗಳಲ್ಲೇ ಆಪರೇಷನ್ ಅಂತ್ಯಗೊಂಡಿತ್ತು. ಇಡೀ ಮಾಲ್ಡೀವ್ಸ್ ಎನ್ನುವ ದೇಶವನ್ನು 9 ಗಂಟೆಗಳಲ್ಲಿಯೇ ಭಾರತ ರಕ್ಷಿಸಿತ್ತು. ವಿದೇಶವೊಂದರ ರಕ್ಷಣೆಗಾಗಿ ಭಾರತದಿಂದ ನಡೆದ ಆಪರೇಷನ್ ಆಗಿತ್ತು.
ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್ ಉತ್ತರ!
ತಮಿಳು ಉಗ್ರರು ಮಾಲ್ಡೀವ್ಸ್ ಮೇಲೆ ಯಾವ ರೀತಿ ದಾಳಿ ಮಾಡಿದ್ದರೆಂದರೆ, ಮಾಲ್ಡೀವ್ಸ್ ಉದ್ಯಮಿಯಿಂದಲೇ ಅಧ್ಯಕ್ಷರ ಹತ್ಯೆಗೆ ಪ್ರಯತ್ನ ನಡೆದಿತ್ತು. ಅಬ್ದುಲ್ಲಾ ಲುತಾಫಿ ಎಂಬಾತನಿಂದ ಮಾಲ್ಡೀವ್ಸ್ ವಶಕ್ಕೆ ಯತ್ನ ನಡೆದಿತ್ತು. ಸಿಕ್ಕಾ ಅಸಿಫ್ ಇಸ್ಮಾಯಿಲ್ ಮಲ್ಲಿಕ್ ಜೊತೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿತ್ತು. ಎಲ್‌ಟಿಟಿಇ ಜೊತೆ ಸೇರಿಕೊಂಡು ಮಾಲ್ಡೀವ್ಸ್ ವಶಕ್ಕೆ ಷಡ್ಯಂತ್ರ ಮಾಡಲಾಗಿತ್ತು.