ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ನವದೆಹಲಿ (ಆ. 15): ರಾಷ್ಟ್ರ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಇಡೀ ದೇಶ ಇಂದು ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿ ಕೆಂಪುಕೋಟೆಯಲ್ಲಿಂದು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
'ಕ್ರೀಡೆ ಇಷ್ಟು ದಿವಸ ಪಠ್ಯೇತರ ಚಟುವಟಿಕೆಯಾಗಿತ್ತು. ಇನ್ಮುಂದೆ ಕ್ರೀಡೆ ಪ್ರಮುಖ ಪಠ್ಯವಾಗಲಿದೆ. ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ ನೀಡಲಾಗುವುದು. ಮಿಜೋರಾಂ ಸೈನಿಕ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಪ್ರಾಯೋಗಿಕ ಆರಂಭವಾಗಿದೆ. ಇನ್ನು ಭಾರತದ ಪ್ರಗತಿಗೆ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನಮ್ಮಲ್ಲಿರುವ ಇಂಧನ, ಸಂಪತ್ತನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಯಾಗಬೇಕು' ಎಂದು ಕರೆ ನೀಡಿದರು.