ವಿದೇಶಿ ಕಮ್ಯುನಿಸಂ ಒಪ್ಪುವುದಾದರೆ, ಭಾರತದ ಆರ್‌ಎಸ್ಎಸ್ ಒಪ್ಪುವುದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಖಡಕ್ ಪ್ರಶ್ನೆ!

Sep 19, 2022, 7:25 PM IST

ಕೇರಳ(ಸೆ.19):  ವಿದೇಶದ ಕಮ್ಯೂನಿಸಂ ಸಿದ್ದಾಂತವನ್ನು ಭಾರತದಲ್ಲಿ ಒಪ್ಪಿಕೊಳ್ಳುವುದರಲ್ಲಿ, ಅನುಸರಿಸುವುದರಲ್ಲಿ ಯಾರಿಗೂ ಯಾವುದೇ ಸಮಸ್ಯೆ ಇಲ್ಲ. ಆದರೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪಿಕೊಂಡರೆ ತಪ್ಪೇನು? ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ. ನಾನು ಆರ್‌ಎಸ್ಎಸ್ ಪ್ರಮುಖರನ್ನು ಭೇಟಿಯಾಗುವದರಿಂದ ತಪ್ಪೇನಿದೆ? ಕಣ್ಣೂರಿನಲ್ಲಿ ಎಷ್ಟು ಕೊಲೆ ನಡೆಯುತ್ತಿದೆ? ಇದನ್ನು ಯಾರು ತಡೆಯಬೇಕು? ಆಡಳಿತ ನಡೆಸುತ್ತಿರುವವರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇದಕ್ಕೆ ಆರ್‌ಎಸ್ಎಸ್ ಕಾರಣವಲ್ಲ. ನನಗೆ ಆರ್‌ಎಸ್ಎಸ್ ಸತತವಾಗಿ ಬೆಂಬಲ ನೀಡಿದೆ. ಅವರ ಬೈಠಕ್ ಸಭೆಯಲ್ಲಿ ನನ್ನನ್ನು ಆಹ್ವಾನಿಸಿದ್ದಾರೆ. ಆರ್‌ಎಸ್ಎಸ್ ಇದುವರೆಗೆ ಬದಲಾಗಿಲ್ಲ. ಆದರೆ ಇತರ ಹಲವು ಸಂಘಟನೆಗಳು ಆರಂಭದಲ್ಲಿ ನನಗೆ ಬೆಂಬಲ ನೀಡಿ ಬಳಿ ದೂರ ಉಳಿದುಕೊಂಡಿದೆ. ಪೂರ್ವಾಗ್ರಹ ಪೀಡಿತರಾಗಿ ಆರೋಪಗಳನ್ನು ಮಾಡಬೇಡಿ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.