Operation Ganga: ಒಟ್ಟಿಗೇ 650 ಜನರ ಕರೆತರುವ ವಾಯುಪಡೆ ವಿಮಾನ ನಿಯೋಜನೆ

Mar 2, 2022, 10:37 AM IST

ನವದೆಹಲಿ (ಮಾ. 02): ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವು ಕಾರ್ಯಾಚರಣೆಗೆ ಮುಂದಾಗುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಭಾರೀ ಪ್ರಮಾಣದ ಜನರನ್ನು ಹೊತ್ತುತರುವ ಸಾಮರ್ಥ್ಯ ಹೊಂದಿರುವ ಹಲವು ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನಗಳನ್ನು ‘ಆಪರೇಷನ್‌ ಗಂಗಾ’ ಕಾರ್ಯಾಚರಣೆಗೆ ನಿಯೋಜಿಸಲು ವಾಯುಪಡೆ ನಿರ್ಧರಿಸಿದೆ.

ಉಕ್ರೇನ್‌ನಲ್ಲಿ ಪರಿಸ್ಥಿತಿ ವಿಷಮವಾಗುತ್ತಿರುವ ಹಿನ್ನೆಲೆಯಲ್ಲಿ, ಜೊತೆಗೆ ಅಂದಾಜು 14000 ಜನರನ್ನು ತುರ್ತಾಗಿ ತೆರವು ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟುಸಂಖ್ಯೆಯಲ್ಲಿ ಸೇನಾ ವಿಮಾನಗಳನ್ನು ಬಳಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ 3 ದಿನಗಳಲ್ಲಿ ಒಟ್ಟು 26 ವಿಮಾನಗಳು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ತವರಿಗೆ ಕರೆ ತರಲಿವೆ.