Sep 30, 2020, 12:04 PM IST
ದಿಸ್ಪುರ (ಸೆ. 30): ನೇಪಾಳದಲ್ಲಿ ಸುರಿದ ಭಾರೀ ಮಳೆಗೆ ಬಿಹಾರ ಅಕ್ಷರಶಃ ತತ್ತರಿಸಿ ಹೋಗಿದೆ. ಅರೇ, ನೇಪಾಳದಲ್ಲಿ ಮಳೆ ಸುರಿದ್ರೆ ಅಸ್ಸಾಂಗೇನೂ ಸಮಸ್ಯೆ ಎಂಬ ಪ್ರಶ್ನೆ ಏಳುವುದು ಸಹಜ. ಹೌದು. ನೇಪಾಳದಲ್ಲಿ ಮಳೆ ಸುರಿದರೆ ನೀರು ಅಸ್ಸಾಂನತ್ತ ನುಗ್ಗಿ ಬರುತ್ತದೆ. ಭಾಗಮತಿ, ಕೋಸಿ, ಖಂಡಂ ಸೇರಿದಂತೆ 8 ನದಿಗಳು ಉಕ್ಕಿ ಹರಿಯಲು ಪ್ರಾರಂಭಿಸುತ್ತವೆ. ಇದರ ಪರಿಣಾಮವೇ ಜಲಪ್ರಳಯ. ಈ ವರ್ಷ ಪ್ರವಾಹಕ್ಕೆ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ರೂ ಬೆಳೆ ಹಾನಿ, ಆಸ್ತಿ ಹಾನಿಯಾಗಿದೆ. ಇದು ಬಿಹಾರದ ಕಥೆಯಾದ್ರೆ ಇನ್ನೊಂದು ಕಡೆ ಆಂಧ್ರದಲ್ಲಿಯೂ ಬಾರೀ ಮಳೆಯಾಗಿದೆ. ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಎಲ್ಲದರ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!