Dec 19, 2023, 11:10 PM IST
ಜ್ಞಾನವಾಪಿ ಮಸೀದಿ ವಿವಾದ ಕುರಿತು ಇಂದು ಅಲಹಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜ್ಞಾನವಾಪಿ ಮಸೀದಿಯೋ ಅಥವಾ ಮಂದಿರವೋ ಇದು ನಿರ್ಧಾರವಾಗಲಿ ಎಂದು ಕೋರ್ಟ್ ಹೇಳಿದೆ. ಜ್ಞಾನವಾಪಿ ಮಸೀದಿ ಕಾಶಿ ವಿಶ್ವನಾಥ ಮಂದಿರಕ್ಕೆ ಸೇರಿದ್ದು. ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ದೇವಸ್ಥಾನ ಪುನರ್‌ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಹಿಂದೂ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಾನ್ಯ ಮಾಡಿದೆ. ಇದೇ ವೇಳೆ ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದ ಮುಸ್ಲಿಂ ಅರ್ಜಿದಾರರ 5 ಅರ್ಜಿಗಳನ್ನು ಕೋರ್ಟ್ ವಜಾ ಮಾಡಿದೆ. 6 ತಿಂಗಳ ಒಳಗೆ ಸರ್ವೆ ನಡೆಸಿ ಇದು ಹಿಂದೂಗಳ ಮಂದಿರವೋ ಅಥವಾ ಮಸೀದಿಯೋ ಎಂದು ನಿರ್ಧರವಾಗಬೇಕು ಎಂದು ಕೋರ್ಟ್ ಸೂಚಿಸಿದೆ.