ಒಬ್ಬ ಹುಡುಗನಿಗಾಗಿ, ಇಬ್ಬರು ಹುಡುಗಿಯರ ಫೈಟ್, ಪೊಲೀಸ್ ಠಾಣೆ ಮೆಟ್ಟಿಲೇರಿತು ಜಡೆ ಜಗಳ!

Oct 29, 2021, 9:56 AM IST

ಬೆಂಗಳೂರು (ಅ. 29): ಲಕ್ನೋದ ಹೊಟೇಲ್‌ವೊಂದರ ಎದುರು ಇಬ್ಬರು ಹುಡುಗಿಯರು ಜುಟ್ಟು ಹಿಡಿದು ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಫೈಟಿಂಗ್ ನೋಡಿ ಜನ ದಂಗಾಗಿ ಹೋಗಿದ್ದರು. ಕಾರಿನಲ್ಲಿ ಬಂದ ಯುವತಿಯೊಬ್ಬಳು ಯುವಕನಿಗಾಗಿ ಕಾಯುತ್ತಾ ನಿಂತಿದ್ದಳು.

ಅದೇ ವೇಳೆ ಕಾರಿನಲ್ಲಿ ಬಂದ ಯುವಕ ಬೇರೊಂದು ಯುವತಿಯ ಜೊತೆ ಹೊಟೇಲ್‌ನಿಂದ ಹೊರ ಬರುತ್ತಿರುವ ದೃಶ್ಯ ಈ ಯುವತಿಯ ಕಣ್ಣಿಗೆ ಬಿದ್ದಿತ್ತು. ಇದನ್ನೇ ನೋಡಿದ್ದೇ ತಡ ಹಳೆಯ ಗೆಳತಿ ಜಗಳಕ್ಕೆ ನಿಂತಿದ್ದಳು. ಈ ಜಗಳದಲ್ಲಿ ಯುವತಿಯೊಬ್ಬಳು ಎಚ್ಚರ ತಪ್ಪಿ ಬಿದ್ದಿದ್ದು, ಯುವಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಎಚ್ಚರವಾದ ಬಳಿಕ ಆ ಯುವತಿ ದೂರು ದಾಖಲಿಸಿದ್ದಾಳೆ.