Dec 10, 2021, 3:33 PM IST
ನವದೆಹಲಿ (ಡಿ. 10): ಮೂರೂ ಸೇನಾ ಪಡೆಗಳ ನೇತೃತ್ವ ವಹಿಸಿದ್ದ ದೇಶದ ಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Bi[in Rawat) ಅವರು ಪತ್ನಿ ಹಾಗೂ ಸಿಬ್ಬಂದಿ ಜತೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ (Helicopter Crash)ತಮಿಳುನಾಡಿನ (Tamilnadu) ಕೂನೂರು ಬಳಿ ಬುಧವಾರ ಭೀಕರವಾಗಿ ಪತನಗೊಂಡಿದೆ.
ಜನರಲ್ ರಾವತ್, ಅವರ ಪತ್ನಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಪೈಕಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಹೆಲಿಕಾಪ್ಟರ್ ದುರಂತದ ರಹಸ್ಯವನ್ನು ಹೊಂದಿದೆ ಎನ್ನಲಾಗಿರುವ ಬ್ಲ್ಯಾಕ್ ಬಾಕ್ಸ್’(Black Box)ಪತ್ತೆಯಾಗಿದೆ. ತನಿಖೆ ಆರಂಭಗೊಂಡಿದೆ. ಇದರೊಂದಿಗೆ ಕಾಪ್ಟರ್ ಅಪಘಾತಕ್ಕೆ ನಿಖರ ಕಾರಣ ಪತ್ತೆಯಾಗುವ ಆಶಾಭಾವನೆ ಮೂಡಿದೆ.
Salute to Bipin Rawat: ಅಪ್ರತಿಮ ಸೇನಾಧಿಕಾರಿಗೆ ಕೊಡಗಿನ ಜೊತೆಗಿತ್ತು ಅವಿನಾಭಾವ ಸಂಬಂಧ..!
2015 ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಬಿಪಿನ್ ರಾವತ್ ಅವರು ಸೇನಾ ಸಿಬ್ಬಂದಿ ಜತೆ ಪ್ರಯಾಣಿಸುತ್ತಿದ್ದ ‘ಚೀತಾ’ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ರಾವತ್ ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದರು. ಭಾರತೀಯ ಸೇನೆಯಲ್ಲಿ ಸುದೀರ್ಘ 4 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಬಿಪಿನ್ ರಾವತ್ ತಮ್ಮ 20ನೇ ವಯಸ್ಸಿನಲ್ಲಿಯೇ ಸೇನೆ ಸೇರಿದ್ದರು. ಬಿಪಿನ್ ರಾವತ್ ಅವರನ್ನು ಡಿ.17ರ 2016ರಲ್ಲಿ ಭಾರತ ಸರ್ಕಾರ ಭೂ ಸೇನೆಯ 27ನೇ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಈ ಮೂಲಕ ಗೋರ್ಖಾ ಬ್ರಿಗೇಡ್‌ನಿಂದ ಅತ್ಯುನ್ನತ ಸ್ಥಾನಕ್ಕೇರಿದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ ಹೆಲಿಕಾಪ್ಟರ್ ಪತನವಾಗಿದ್ಹೇಗೆ..? ತಜ್ಞರು ಕೊಡುವ ಕಾರಣಗಳೇನು..?