ಯುವಕ, ಯುವತಿಯರಿಗೆ ಸೇನೆಯಲ್ಲಿ 4 ವರ್ಷಗಳ ಅಲ್ಪಾವಧಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ‘ಅಗ್ನಿಪಥ’ (Agnipath) ಯೋಜನೆ ಕುರಿತು ಹಲವು ರಾಜ್ಯಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹೊರತಾಗಿಯೂ, ‘ಯಾವುದೇ ಕಾರಣಕ್ಕೂ ಯೋಜನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಕೇಂದ್ರ ಸರ್ಕಾರ ಮತ್ತು ಸೇನೆ (Indian Army) ಸ್ಪಷ್ಟಪಡಿಸಿವೆ.

‘ಸೇನೆಗೆ ಬೇಕಾಗಿರುವುದು ಶಿಸ್ತಿನ ಸಿಪಾಯಿಗಳು, ಗಲಭೆಕೋರರು, ಲೂಟಿಕೋರರು ಸೇನೆಗೆ ಬೇಕಾಗಿಲ್ಲ. ಅಂಥವರಿಗೆ ಅವಕಾಶವನ್ನೂ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸುವ ಮೂಲಕ, ಹಿಂಸಾಕೃತ್ಯಗಳಲ್ಲಿ ಭಾಗಿಯಾದವರಿಗೆ ಸೇನೆಗೆ ಪ್ರವೇಶವಿಲ್ಲ ಎಂಬ ಕಠಿಣ ಎಚ್ಚರಿಕೆ ನೀಡಿವೆ. ಹೋರಾಟ ಕೈಬಿಡುವಂತೆ ಮನವಿ ಮಾಡಿವೆ.
ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಅಗ್ನಿಪಥ ಯೋಜನೆಯಡಿ ಸೇರ್ಪಡೆಯಾಗಲು ಅವಕಾಶ ನೀಡುವುದಿಲ್ಲ’ ಎಂದು ಘೋಷಿಸಿವೆ. ಈ ಮೂಲಕ ಈಗಾಗಲೇ ಹಿಂಸಾಕೃತ್ಯ ನಡೆಸಿದವರಿಗೆ ಮತ್ತು ಮುಂದೆ ನಡೆಸಲು ಉದ್ದೇಶಿಸಿರುವವರಿಗೆ ಕಠಿಣ ಸಂದೇಶ ರವಾನಿಸಿವೆ. ‘ಅಗ್ನಿಪಥ ಬಹಳ ಒಳ್ಳೆಯ ಯೋಜನೆ. ಯಾರಿಗಾದರೂ ಇದರ ಬಗ್ಗೆ ಅನುಮಾನ ಅಥವಾ ಆತಂಕಗಳಿದ್ದರೆ ಸಮೀಪದ ಮಿಲಿಟರಿ ಕೇಂದ್ರಗಳು, ವಾಯುಪಡೆ ಅಥವಾ ನೌಕಾಪಡೆಯ ನೆಲೆಗಳಿಗೆ ಭೇಟಿ ನೀಡಿ ಬಗೆಹರಿಸಿಕೊಳ್ಳಬಹುದು’ ಎಂದೂ ತಿಳಿಸಿದ್ದಾರೆ.