Aug 24, 2020, 3:27 PM IST
ನವದೆಹಲಿ (ಆ. 24): ಮಳೆ ಬರದಿದ್ದರೆ ಒಂದು ಸಮಸ್ಯೆ. ಬಂದರೆ ಇನ್ನೊಂದು ರೀತಿ ಸಮಸ್ಯೆ. ಅತಿವೃಷ್ಟಿ, ಅನಾವೃಷ್ಟಿ ಎರಡೂ ಕೂಡಾ ಸಮಸ್ಯೆಯನ್ನು ತಂದಿಡುತ್ತದೆ. ಈ ಬಾರಿ ಮೊದಲು ಮಳೆಯ ಅಬ್ಬರ ಇಲ್ಲದಿದ್ದರೂ ಆಗಸ್ಟ್ ತಿಂಗಳಲ್ಲಿ ಅಬ್ಬರ ಜೋರಾಗಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹದಿಂದ ಜನ ಕಂಗಾಲಾಗಿದ್ದಾರೆ. ಬೆಳೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಮನೆ ಇಲ್ಲ, ಜಮೀನಿಲ್ಲ ಮುಂದೇನು ಗತಿ ಎಂದು ಚಿಂತಾಕ್ರಾಂತರಾಗಿದ್ದಾರೆ.
ಇಂತದ್ದೊಂದು ದಯನೀಯ ಸ್ಥಿತಿಯನ್ನು ಸೃಷ್ಟಿಸಿದೆ ಮಹಾಮಳೆ. ಈಶಾನ್ಯ ಭಾರತದ ರಾಜ್ಯಗಳಂತೂ ಅಕ್ಷರಶಃ ತತ್ತರಿಸಿ ಹೋಗಿವೆ. ಜನರು ಕೂಡಾ ತತ್ತರಿಸಿ ಹೋಗಿದ್ಧಾರೆ. ಇದೇ ರೀತಿ ಮಳೆರಾಯ ಅಬ್ಬರಿಸಿದರೆ ಅಪಾಯ ಖಂಡಿತವಾಗಿಯೂ ಕಟ್ಟಿಟ್ಟ ಬುತ್ತಿ. ಯಾವ ರಾಜ್ಯಗಳಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್..!
ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇನ್ಮುನಿಟಿ ಹೆಚ್ಚಾಗಲು ನಿಮ್ಮ ಟೀ ಹೀಗಿರಲಿ