ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ 'ಕಾಶಿ ವಿಶ್ವನಾಥ ಕಾರಿಡಾರ್' (Kashi Vishwanath Dham) ಯೋಜನೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಕಾಶಿಗೆ ಹೊಸ ಕಳೆ ಬಂದಂತಾಗಿದೆ.
ನವದೆಹಲಿ (ಡಿ. 14): ಪ್ರಧಾನಿ ನರೇಂದ್ರ ಮೋದಿ ತಮ್ಮ ಕನಸಿನ 'ಕಾಶಿ ವಿಶ್ವನಾಥ ಕಾರಿಡಾರ್' (Kashi Vishwanath Dham) ಯೋಜನೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಕಾಶಿಗೆ ಹೊಸ ಕಳೆ ಬಂದಂತಾಗಿದೆ.
3 ಸಾವಿರ ಚದರಡಿ ಪ್ರದೇಶದಲ್ಲಿದ್ದ ವಿಶ್ವನಾಥ ದೇವಾಲಯದ (Vishwanath Temple) ಪ್ರದೇಶವನ್ನು 5 ಲಕ್ಷ ಚದರಡಿ ವ್ಯಾಪ್ತಿಗೆ ವಿಸ್ತರಿಸಲಾಗಿದೆ. ಇದರಿಂದ ವಿಶ್ವನಾಥ ದೇವಾಲಯದಿಂದ ಗಂಗಾನದಿಗೆ (Ganga River) ನೇರ ದರ್ಶನ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಭಕ್ತರಿಗೆ ಅನುಕೂಲವಾಗುವ ಹಲವು ವ್ಯವಸ್ಥೆಗಳು, ಮ್ಯೂಸಿಯಂ, ಸಭಾಂಗಣ, ಇತ್ಯಾದಿಗಳನ್ನು ನಿರ್ಮಿಸಲಾಗಿದೆ. ಈ ರೀತಿ ಸುಂದರ ಕಾಶಿ ನಿರ್ಮಾಣ ಮೋದಿ ಅವರ ಕನಸಾಗಿತ್ತು. 2019 ರಲ್ಲಿ ಇದಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಅದು ಈಗ ಸಾಕಾರಗೊಂಡಿದೆ.