ಇಂಡಿಯಾ ಎಂದಿದ್ದ ಕರಡು ಸಂವಿಧಾನದಲ್ಲಿ ಭಾರತ ಸೇರಿಸಿದ್ದ ಅಂಬೇಡ್ಕರ್!

Sep 7, 2023, 12:20 AM IST

ಭಾರತ ಅನ್ನೋ ಹೆಸರಿನ ಚರ್ಚೆ ಜೋರಾಗಿದೆ. ಪ್ರಸೆಟೆಂಡ್  ಆಫ್ ಭಾರತ, ಪಿಎಂ ಆಫ್ ಭಾರತ ಅನ್ನೋ ಆಮಂತ್ರಣ ಇದೀಗ ಭಾರಿ ತಳಮಳ ಸೃಷ್ಟಿಸಿದೆ.  ಕೇಂದ್ರ ಇಂಡಿಯಾ ಹೆಸರನ್ನು ಬದಲಾಯಿಸಲು ಹೊರಟಿದೆ. ಇಂಡಿಯಾ ಮೈತ್ರಿ ಒಕ್ಕೂಟ ರಚನೆಯಾದ ಬಳಿಕ ಮೋದಿಗೆ ಭಯ ಶುರುವಾಗಿದೆ ಅನ್ನೋ ಮಾತುಗಳು ಜೋರಾಗಿದೆ. ಆದರೆ  1948ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕರಡು ಸಂವಿಧಾನದಲ್ಲಿದ್ದ ಇಂಡಿಯಾ ಹೆಸರಿನ ಜೊತೆಗೆ ಭಾರತ ಎಂದು ಸೇರಿಸಿದ್ದರು. ಈ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಸಂವಿಧಾನ ರಚನೆ ವೇಳೆ ಇಂಡಿಯಾ ಹೆಸರಿಗೆ  ತೀವ್ರ ವಿರೋಧ ವ್ಯಕ್ತವಾಗಿತ್ತು.