ರಾಮಮಂದಿರ ಲೋಕಾರ್ಪಣೆ ಸಮಯದಲ್ಲಿ ಹೊಸ ವಿವಾದ,ಮಂದಿರ ಉದ್ಘಾಟನೆಗೆ ಯಾಕೆ ಪೀಠಾಧಿಪತಿಗಳ ವಿರೋಧ..?

Jan 12, 2024, 12:35 PM IST

ಅಯೋಧ್ಯಾ ನಗರಿ ದೊಡ್ಡ ಹಬ್ಬಕ್ಕಾಗಿ ಸಿದ್ಧಗೊಂಡಿದೆ. ಹಿಂದೂ ಸಮಾಜದ ನೂರಾರು ವರ್ಷಗಳ ಕಾಯುವಿಕೆಗೆ ಪೂರ್ಣವಿರಾಮವಿಡೋಕೆ ಸಜ್ಜಾಗಿದೆ. ಪ್ರಭು ಶ್ರೀ ರಾಮನ ಮಂದಿರಕ್ಕೆ ದಿನಗಣನೆ ಶುರುವಾಗಿದೆ. ಇದೇ ಜನವರಿ 22ರಂದು ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಯಾಗಲಿದೆ.ಇದೇ ಸಂದರ್ಭದಲ್ಲಿ ಒಂದಿಷ್ಟು ವಿವಾದಗಳು ಹುಟ್ಟಿಕೊಂಡಿವೆ. ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಅಯೋಧ್ಯಾ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನ ಇಡೀ ದೇಶವೇ ಹೆಮ್ಮೆ ಪಡುವಂತ ರಾಮನ ಹಬ್ಬವಾಗಿ ಆಚರಿಸೋಕೆ ನಿಂತಿದೆ. ಅದರ ಭಾಗವಾಗಿ ಆಯ್ದ ಗಣ್ಯರಿಗೆ ಹಾಗೂ ಸ್ವಾಮೀಜಿಗಳಿಗೆ ಆಮಂತ್ರಣವನ್ನ ನೀಡುವ ಕೆಲಸವನ್ನೂ ಮಾಡಿತ್ತು. ಆದ್ರೆ ಈಗ ಆಮಂತ್ರಣ ಬಂದರೂ ಸಹ ಕೆಲ ಸ್ವಾಮೀಜಿಗಳು ರಾಮಮಂದಿರಕ್ಕೆ ಹೋಗೋದಿಲ್ಲ ಅನ್ನೋ ಮಾತನ್ನಾಡಿದ್ದಾರೆ.ಶ್ರೀಗಳು ಹೇಳೊ ಪ್ರಕಾರ ‘ರಾಮಮಂದಿರಕ್ಕೆ ವಿರೋಧ ಇಲ್ಲ, ಅಯೋಧ್ಯೆಗೂ ಹೋಗೋದಿಲ್ಲ’ ಅನ್ನೋದು , ಈ ಬಗ್ಗೆತುಂಬಾ ಅಚಲ ನಿರ್ಧಾರ ತಗೊಂಡ ಹಾಗೇ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಅಯೋಧ್ಯೆಯಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠೆ ನಡೆಯಬೇಕು’‘ಆಗದಿದ್ದರೆ ದೇವತೆಗಳ ಜಾಗದಲ್ಲಿ ಭೂತಗಳು ಮೂರ್ತಿ ರೂಪದಲ್ಲಿ ಪ್ರವೇಶ’‘ಇಡೀ ಕ್ಷೇತ್ರವನ್ನೇ ಭೂತಗಳು ಸರ್ವನಾಶ ಮಾಡಿಬಿಡುತ್ತವೆ’ ಅನ್ನೋದು ಶ್ರೀಗಳ ಮಾತು