ಪುಸ್ತಕ ಯಾಕೆ ತಂದಿಲ್ಲ ಅಂದ್ರೆ, ಕಣ್ಣೀರಿಡುತ್ತಾ ಶಿಕ್ಷಕರ ಬಳಿ ಬಾಲಕ ಹೇಳಿದ್ದೇನು ನೋಡಿ

Nov 29, 2021, 9:56 AM IST

ಬೆಂಗಳೂರು (ನ. 29): ಮಕ್ಕಳು ಶಾಲೆಯಲ್ಲಿ ಶಿಕ್ಷಕರ (Teacher) ಬಳಿ ಪೆನ್, ಪೆನ್ಸಿಲ್ ಅಂತ ದೂರು ಹೇಳುವುದನ್ನು ನೋಡಿದ್ದೇವೆ. ಇಲ್ಲೊಂದು ಮಗು ಶಿಕ್ಷಕರ ಬಳಿ ಕಣ್ಣೀರಿಡುತ್ತಾ, ತನ್ನ ತಂದೆಯ ಬಗ್ಗೆಯೇ ದೂರು ನೀಡಿದ್ದಾನೆ. 'ನನ್ನ  ತಂದೆ ನನಗೆ ಪುಸ್ತಕಗಳನ್ನು ನೀಡುತ್ತಿಲ್ಲ. ದಿನಾ ಕುಡಿದು (Drinks) ಬಂದು ಹೊಡೆಯುತ್ತಾರೆ ಎಂದು ಕಣ್ಣೀರಿಡುತ್ತಾ ಹೇಳುತ್ತಾನೆ. ಮಗು ಅಳುವುದನ್ನು ನೋಡಿದ್ರೆ ಕರುಳು ಚುರುಕ್ ಎನ್ನುತ್ತದೆ. ಬಿಹಾರದ ರೊಹತ್ತಾಸ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ಇದು. 

Viral Video: ತಲೆಗೆ ಕೈಗೆ ಫುಲ್ ಬ್ಯಾಂಡೇಜ್, ಆದ್ರೂ ಡ್ಯಾನ್ಸ್ ಜೋಶ್‌ಗೆ ಕಮ್ಮಿ ಇಲ್ಲ

ತರಗತಿಯಲ್ಲಿ ಶಿಕ್ಷಕರ ಮುಂದೆ ಮಗುವೊಂದು ಅಳುತ್ತಿದ್ದು, ಪುಸ್ತಕವನ್ನು ಯಾಕೆ ತಂದಿಲ್ಲ ಎಂದು ಕೇಳುತ್ತಾರೆ. 'ನನ್ನ ತಂದೆ ಎಲ್ಲಾ ಹಣವನ್ನು (Money) ಮದ್ಯಪಾನಕ್ಕೆ ಖರ್ಚು ಮಾಡುತ್ತಾರೆ. ಓದಲು ಪುಸ್ತಕ ನೀಡುವುದಿಲ್ಲ ಎಂದು ನೋವನ್ನು ಹೇಳಿಕೊಂಡಿದ್ದಾನೆ. ಇದನ್ನು ತಂದೆಯೂ ಒಪ್ಪಿಕೊಂಡಿದ್ದಾನೆ. ಬಿಹಾರದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ಈ ಮಗುವಿನ ವಿಡಿಯೋ ವೈರಲ್ ಆಗಿದೆ.