'ದಾಳಿಕೋರರು ನಶೆಯಲ್ಲಿದ್ದರು, ನಾವು ಕೈ ಮುಗಿದು ಮನವಿ ಮಾಡಿದ್ರೂ ಕೇಳಿಲ್ಲ'

Jan 27, 2021, 4:14 PM IST

ನವದೆಹಲಿ (ಜ. 27): ಕೇಂದ್ರ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಶಾಂತಿಯುತವಾಗಿ ಮುಕ್ತಾಯವಾಗಬೇಕಿತ್ತು. ಆದರೆ ಕಂಡು ಕೇಳರಿಯದ ಅಹಿತಕರ ಘಟನೆಗೆ ದೆಹಲಿ ಸಾಕ್ಷಿಯಾಗಿದೆ. 

'ದಾಳಿಕೋರರು ನಶೆಯಲ್ಲಿದ್ದರು, ನಾವು ಕೈ ಮುಗಿದು ಮನವಿ ಮಾಡಿದ್ರೂ ಕೇಳಿಲ್ಲ'

'ಕೆಂಪುಕೋಟೆ ನಮ್ಮ ಟೀಂ ಕರ್ತವ್ಯದಲ್ಲಿತ್ತು. ಏಕಾಏಕಿ ಯುವಕರ ಗುಂಪು ನಮ್ಮ ಮೇಲೆ ದಾಳಿ ಮಾಡಿತು. ಅವರೆಲ್ಲಾ ನಶೆಯಲ್ಲಿದ್ದರು. ಕತ್ತಿ, ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ. ನಾವೆಲ್ಲಾ ಕೈ ಮುಗಿದು ಮನವಿ ಮಾಡಿದ್ರೂ ಕೇಳಿಲ್ಲ ಎಂದು' ದೆಹಲಿ ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ಸಂದೀಪ್ ಹೇಳಿದ್ದಾರೆ.