
ದಿಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ 70 ಕ್ಷೇತ್ರಗಳಿಗೆ ಸ್ಪರ್ಧಿಸಿದೆ. ಈ ಪೈಕಿ 68 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಇತ್ತ ಆಪ್ 22 ಸ್ಥಾನಕ್ಕೆ ಕುಸಿದಿದ್ದರೆ, ಬಿಜೆಪಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರ ಹಿಡಿಯುತ್ತಿದೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿಯನ್ನು 27 ವರ್ಷದ ಬಳಿಕ ಅಧಿಕಾರ ಹಿಡಿಯುವಂತೆ ಮಾಡಿದೆ. ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. 10 ವರ್ಷದ ಆಡಳಿತ ವಿರೋಧಿ ಅಲೆಗೆ ಆಪ್ ಕೊಚ್ಚಿ ಹೋಗಿದೆ. 70 ಕ್ಷೇತ್ರಗಳ ಪೈಕಿ ಬಿಜೆಪಿಗೆ 48 ಸ್ಥಾನ ಗೆದ್ದುಕೊಂಡಿದೆ. ಇತ್ತ ಆಪ್ 22 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತೆ ಶೂನ್ಯದಲ್ಲಿ ಹೊರಳಾಡಿದೆ. 70ರ ಪೈಕಿ 68 ಕ್ಷೇತ್ರದಲ್ಲೂ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.