ಮತೀಯವಾದಿಗಳ ಮಟ್ಟಹಾಕಿ: ಮುಸ್ಲಿಂ ಧಾರ್ಮಿಕ ಸಮ್ಮೇಳನದಲ್ಲಿ ದೋವಲ್‌ ಕರೆ

Aug 1, 2022, 5:11 PM IST

ಭಾರತದಲ್ಲಿ ದಿನಕ್ಕೊಂದು ಕಡೆ ಧರ್ಮದ ವಿಚಾರವಾಗಿ ಹತ್ಯೆಗಳು ಆಗ್ತಾ ಇದೆ.. ದೇಶದಲ್ಲಿ ಅಶಾಂತಿಯ ವಾತಾವರಣವನ್ನ ಸೃಷ್ಟಿಸೋ ಕೆಲಸ ಧರ್ಮದ ಹೆಸರಲ್ಲಿ ನಡೀತಿದೆ. ಇದು ಭಾರತದ ಪ್ರಗತಿ ಮೇಲೆ ಕೂಡ ದೊಡ್ಡ ಪರಿಣಾಮವನ್ನ ಬೀರುತ್ತೆ. ನಮ್ಮ ದೇಶದ ಶಾಂತಿಯನ್ನ ಕದಡುವ ಕೈಗಳ ವಿರುದ್ಧ ಮನಸ್ಥಿತಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ (Ajit Doval) ಯುದ್ಧ ಸಾರಿದ್ದಾರೆ. ಅಂಥವರ ವಿರುದ್ಧ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. 

 ದೇಶದ ಹಲವು ರಾಜ್ಯಗಳಲ್ಲಿ ಮತೀಯವಾದಿ ಚಟುವಟಿಕೆಯಲ್ಲಿ ತೊಡಗಿರುವ ಪಿಎಫ್‌ಐಯನ್ನು ದೇಶದಲ್ಲಿ ನಿಷೇಧಿಸಬೇಕು ಎಂಬ ಗೊತ್ತುವಳಿಯನ್ನು ದೆಹಲಿಯಲ್ಲಿ ನಡೆದ ಅಖಿಲ ಭಾರತ ಸೂಫಿ ಸಜ್ಜಾದ್‌ನಶೀನ್‌ ಮಂಡಳಿ ಹಮ್ಮಿಕೊಂಡಿದ್ದ ಅಂತರ್‌ಧರ್ಮೀಯ ಸಮ್ಮೇಳನದಲ್ಲಿ ಅಂಗೀಕಾರ ಮಾಡಲಾಗಿದೆ.

Mann Ki Baat ನಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಮೋದಿ ಶ್ಲಾಘನೆ

ಈ ಸಭೆಯಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಹ ದೇಶದಲ್ಲಿ ತೀವ್ರವಾದಿ ಗುಂಪುಗಳನ್ನು ಮಟ್ಟಹಾಕಬೇಕು. ಕೆಲವು ಜನರು ದೇಶದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಹರಡುತ್ತಿದ್ದಾರೆ. ಇದರಿಂದ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಹೋರಾಡಬೇಕು ಎಂದು ಎಂದು ಕರೆ ನೀಡಿದರು