Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

Nov 18, 2021, 8:34 PM IST

ಬೆಂಗಳೂರು(ನ.18):  ಈ ತಿಂಗಳ ಕಾರ್ತಿಕ ಪೂರ್ಣಿಮೆ (Kartik Purnima) ವಿಶೇಷವಾಗಿರಲಿದೆ. ಯಾಕೆಂದರೆ, ಅಂದು ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ (lunar eclipse) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಮಧ್ಯೆ  ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ನಿರಂತರ ಮಳೆ ಸುರಿಯುತ್ತಲೇ ಇದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಮುಂದೆ ಬರುವ ಚಂದ್ರಗ್ರಹಣಕ್ಕೂ ಈ ಮಳೆಗೂ ಏನಾದ್ರು ಸಂಬಂಧ ಇದೆಯಾ? ಅತೀವ ಮಳೆಗೆ ಕಾರಣಾವಾಯಿತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ ಎಂಬ ಕೂತುಹಲ ಮೂಡಿದೆ.

ನ.19ಕ್ಕೆ ಶತಮಾನದ ಸುದೀರ್ಘ ಚಂದ್ರ ಗ್ರಹಣ, ರಾಜ್ಯದಲ್ಲಿ ಗೋಚರಿಸುತ್ತಾ?

ಹೌದು ಎನ್ನುತ್ತೆ ಲೆಕ್ಕಾಚಾರ! ವಿಶೇಷವಾಗಿ ಚಂದ್ರ (Moon) ಮತ್ತು ಭೂಮಿಯ (Earth) ನಡುವಿನ ಅಂತರದಿಂದಾಗಿ ಈ ಗ್ರಹಣ ದೀರ್ಘಾವದಿಯಾಗಿರುತ್ತದೆ. ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ (lunar eclipse) ಎನಿಸಿಕೊಳ್ಳಲಿದೆ.  ಈ ಚಂದ್ರಗ್ರಹಣ ಬರೊಬ್ಬರಿ 580 ವರ್ಷಳ ನಂತರ ಸಂಭವಿಸುತ್ತಿದೆ. ಈ ಹಿಂದೆ 18 ಫೆಬ್ರುವರಿ 1440 ರಂದು ಈ ರೀತಿ ಚಂದ್ರಗ್ರಹಣ ಸಂಭವಿಸಿತ್ತು. ನಾಳೆ ಸಂಭವಿಸಿದ್ರೆ ಈ ಚಂದ್ರಗ್ರಹಣ ಮತ್ತೆ ಬರುವುದು 18 ಫೆಬ್ರುವರಿ 2690 ನೇ ಇಸವಿಗೆ. ಯಾವುದೇ ಗ್ರಹಣ ದೀರ್ಘ ಕಾಲದ ನಂತರ ಮರುಕಳಿಸಿದರೆ ಜಗತ್ತಿಗೆ ಎನಾದ್ರೂ ಒಂದು ಕಂಟಕ, ಅನಾಹುತ ತಪ್ಪಿದ್ದಲ್ಲ ಅನ್ನೊ ವಾಡಿಕೆ ಇದೆ. ಹಾಗಾಗಿ ಈ ಗ್ರಹಣ ಮಳೆಯ ಮೂಲಕ ಕೇಡು ತರುತ್ತಿದೆ ಎಂಬ ಅನುಮಾನ ಹಲವರಲ್ಲಿದೆ.