2 ಸ್ವದೇಶಿ ಲಸಿಕೆಗೆ ಡಿಸಿಜಿಐ ಒಕೆ, ಕೊರೊನಾ ಮುಕ್ತದೆಡೆಗೆ ಭಾರತದ ಹೆಜ್ಜೆ

Jan 4, 2021, 9:38 AM IST

ಬೆಂಗಳೂರು (ಜ. 04): ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ವದೇಶಿ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ದೇಶದಲ್ಲಿ ನಿರ್ಬಂಧಿತ ಪ್ರಮಾಣದಲ್ಲಿ ತುರ್ತಾಗಿ ಬಳಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. 

ನಿಮಗೆ ವ್ಯಾಕ್ಸಿನ್ ಬೇಕಾ? ಹಾಗಾದ್ರೆ ಈ ಸ್ಟೆಪ್‌ಗಳನ್ನು ಫಾಲೋ ಮಾಡಿ!

ಉಳಿದ ಪ್ರಕ್ರಿಯೆಗಳು ಪೂರ್ಣಗೊಂಡರೆ ಮುಂದಿನ 8 ರಿಂದ 10 ದಿನಗಳಲ್ಲಿ ದೇಶಾದ್ಯಂತ ಲಸಿಕೆ ವಿತರಣೆ ಪ್ರಾರಂಭಿಸುವುದಾಗಿ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಸಂಕ್ರಾಂತಿ ಹಬ್ಬದಿಂದ ಲಸಿಕೆ ಅಭಿಯಾನ ಶುರುವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ 3 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ವಿತರಣೆ ನಡೆಯಲಿದೆ.