ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಎರಡನೇ ಅತಿದೊಡ್ಡ ಹುದ್ದೆಯಾದ ಸರಕಾರ್ಯವಾಹ ಸ್ಥಾನವು ಕನ್ನಡಿಗರಿಗೆ ಲಭಿಸಿದ್ದು, ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕಗೊಂಡಿದ್ದಾರೆ.
ಬೆಂಗಳೂರು (ಮಾ. 21): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಎರಡನೇ ಅತಿದೊಡ್ಡ ಹುದ್ದೆಯಾದ ಸರಕಾರ್ಯವಾಹ ಸ್ಥಾನವು ಕನ್ನಡಿಗರಿಗೆ ಲಭಿಸಿದ್ದು, ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕಗೊಂಡಿದ್ದಾರೆ.
ಸರಸಂಘಚಾಲಕ ಮೋಹನ್ ಭಾಗವತ್ ಹುದ್ದೆಯ ನಂತರ ಸರಕಾರ್ಯವಾಹ ಸ್ಥಾನ ದೊಡ್ಡ ಹುದ್ದೆಯಾಗಿದೆ. ಕನ್ನಡಿಗ ಹೊ.ವೇ. ಶೇಷಾದ್ರಿ ಅವರ ಬಳಿಕ ದತ್ತಾತ್ರೇಯ ಹೊಸಬಾಳೆ ಅವರಿಗೆ ಈ ಉನ್ನತ ಹುದ್ದೆ ಲಭಿಸಿದೆ. ಈವರೆಗೆ ಈ ಸ್ಥಾನದ ಜವಾಬ್ದಾರಿಯನ್ನು ಸುರೇಶ ಭಯ್ಯಾಜಿ ಜೋಶಿ ನಿರ್ವಹಿಸುತ್ತಿದ್ದರು. ಇನ್ನು ಮೂರು ವರ್ಷಗಳ ಕಾಲ ದತ್ತಾಜಿ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ದತ್ತಾತ್ರೇಯ ಹೊಸಬಾಳೆ ಅವರ ಹಿನ್ನಲೆ, ಸಾಧನೆ ಬಗ್ಗೆ ಒಂದು ವರದಿ ಇಲ್ಲಿದೆ.