'ಅಸಾನಿ' ಅಬ್ಬರ, ಆಂಧ್ರ ಕರಾವಳಿಯಲ್ಲಿ ಪತ್ತೆಯಾಯ್ತು 'ಚಿನ್ನದ' ರಥ, ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು!

'ಅಸಾನಿ' ಅಬ್ಬರ, ಆಂಧ್ರ ಕರಾವಳಿಯಲ್ಲಿ ಪತ್ತೆಯಾಯ್ತು 'ಚಿನ್ನದ' ರಥ, ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು!

Published : May 11, 2022, 09:08 AM IST

ಆಸಾನಿ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಅಲೆಗಳ ನರ್ತನ ಆರಂಭವಾಗಿದೆ. ಹೀಗಿರುವಾಗ ಆಂಧ್ರ ಪ್ರದೇಶದ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದ ಮಾದರಿಯೊಂದು ತೇಲಿ ಬಂದಿದ್ದು, ಇದನ್ನು ನೋಡಲು ಜನರು ಕರಾವಳಿ ಪ್ರದೇಶದತ್ತ ಧಾವಿಸುತ್ತಿದ್ದಾರೆ. 

ಅಮರಾವತಿ(ಮೇ.11): ಮಂಗಳವಾರ ಸಂಜೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಕರಾವಳಿಯಲ್ಲಿ ಚಿನ್ನದ ಬಣ್ಣದ ರಥದಂತಹ ಮಾದರಿಯು ಪತತ್ತೆಯಾಗಿದೆ. ಇದು ಮ್ಯಾನ್ಮಾರ್, ಮಲೇಷ್ಯಾ ಅಥವಾ ಥೈಲ್ಯಾಂಡ್‌ನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಇದನ್ನು ದಡಕ್ಕೆ ಎಳೆದಿದ್ದಾರೆ.

ರಥವು ಆಗ್ನೇಯ ಏಷ್ಯಾದ ದೇಶಗಳ ಮಠದ ಆಕಾರವನ್ನು ಹೋಲುತ್ತದೆ. ಆಸಾನಿ ಚಂಡಮಾರುತದ ಪ್ರಭಾವದಿಂದ ರಥವು ಆಂಧ್ರಪ್ರದೇಶ ಕರಾವಳಿಗೆ ತೇಲಿ ಬಂದಿದೆ ಎಂದು ಶಂಕಿಸಲಾಗಿದೆ. ಸ್ಥಳೀಯ ನಾವಿಕರ ಪ್ರಕಾರ, ಚಂಡಮಾರುತದ ಪ್ರಭಾವದಿಂದ ಉಂಟಾದ ಅಲೆಗಳ ಅಬ್ಬರದ ಕಾರಣ ರಥವು ಕರಾವಳಿಗೆ ಕೊಚ್ಚಿ ಬಂದಿರಬಹುದೆಂದಿದ್ದಾರೆ. ಚಿನ್ನದ ರಥದ ದರ್ಶನ ಪಡೆಯಲು ಅಕ್ಕಪಕ್ಕದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ದಡದತ್ತ ಆಗಮಿಸಲಾರಂಭಿಸಿದ್ದಾರೆ. 

ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಮೊದಲ ಬಾರಿ ಒತ್ತಡ ರೂಪುಗೊಂಡಿದ್ದರಿಂದ, ಮ್ಯಾನ್ಮಾರ್, ಥೈಲ್ಯಾಂಡ್, ಮಲೇಷ್ಯಾ ಅಥವಾ ಇಂಡೋನೇಷ್ಯಾದಂತಹ ಅಂಡಮಾನ್ ಸಮುದ್ರಕ್ಕೆ ಹತ್ತಿರವಿರುವ ದೇಶದಿಂದ ಅಲೆಗಳ ರಭಸಕ್ಕೆ ರಥವನ್ನು ಬಂದಿರಬಹುದು. ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಅವರನ್ನು ಸಂಪರ್ಕಿಸಿದಾಗ, ಯಾವುದೇ ದೇಶದಿಂದ ಬಂದಿರದಿರಬಹುದು. "ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿದೆ ಮತ್ತು ಹೆಚ್ಚಿನ ಉಬ್ಬರವಿಳಿತದ ಚಟುವಟಿಕೆಯು ಶ್ರೀಕಾಕುಲಂ ತೀರಕ್ಕೆ ತಂದಿರಬಹುದು ಎಂಬುವುದು ನಮ್ಮ ಅಂದಾಜು" ಎಂದು ಅವರು ಹೇಳಿದರು.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more