ವಿದೇಶಗಳಿಂದ 50 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಆಮದು, 10 ಆಸ್ಪತ್ರೆಗಳಲ್ಲಿ ಉತ್ಪಾದನಾ ಘಟಕ.!

Apr 19, 2021, 1:46 PM IST

ಬೆಂಗಳೂರು (ಏ. 19): ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ಉಂಟಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ದೇಶದ 100 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಉತ್ಪಾದನೆ ಮಾಡುವುದಾಗಿ ಹೇಳಿದೆ. 12 ರಾಜ್ಯಗಳಲ್ಲಿ ಆಕ್ಸಿಜನ್ ತೀವ್ರ ಕೊರತೆ ಉಂಟಾಗಿದೆ. ವಿದೇಶಗಳಿಂದ 50 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. 

ಆಸ್ಪತ್ರೆಗೆ ಬಂದ್ರೂ ಬೆಡ್ ಸಿಗಲ್ಲ, ಬೆಡ್‌ ಸಿಕ್ಕರೂ ICU ಸಿಗಲ್ಲ, ಸೋಂಕಿತರ ಗೋಳು ಕೇಳೋರಿಲ್ಲ..!

ದೆಹಲಿಯಲ್ಲಿ ಸೋಂಕು ಸ್ಫೋಟಗೊಂಡಿದ್ದು ದಿನಕ್ಕೆ 24 ಸಾವಿರ ಕೇಸ್‌ಗಳು ದಾಖಲಾಗುತ್ತಿದೆ. ಆಸ್ಪತ್ರೆಗಳಲ್ಲಿ 6-7 ಸಾವಿರ ಸೋಂಕಿತರಿಗೆ ಆಕ್ಸಿಜನ್ ಪೂರೈಸಲು ಸರ್ಕಾರ  ಪರದಾಡುತ್ತಿದೆ. ಇನ್ನು ನಮ್ಮ ರಾಜ್ಯಕ್ಕೆ ಬಂದ್ರೆ ಆಕ್ಸಿಜನ್ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.