ಮಹಾರಾಷ್ಟ್ರದಲ್ಲಿ 1700ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ..!

Apr 12, 2020, 2:57 PM IST

ಮುಂಬೈ(ಏ.12): ವಾಣಿಜ್ಯ ನಗರಿ ಮುಂಬೈ ಇದೀಗ ಕೊರೋನಾದ ರಾಜಧಾನಿಯಾಗಿ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಮಹರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದ್ದು ಒಂದು ಸಾವಿರದ ಏಳುನೂರರ ಗಡಿ ದಾಟಿದೆ.

ಮಹಾರಾಷ್ಟ್ರ ಈಗ ದೇಶದ ಕೊರೋನಾ ರಾಜಧಾನಿ!

ದೇಶದಲ್ಲಿ ಅತಿಹೆಚ್ಚು ಸೋಂಕು ತಗುಲಿದ ಹಾಗೂ ಬಲಿ ಪಡೆದ ರಾಜ್ಯವೆಂದರೆ ಅದು ಮಹಾರಾಷ್ಟ್ರ ಎನಿಸಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ 1,761 ಮಂದಿಗೆ ಸೋಂಕು ತಗುಲಿದ್ದು, 127 ಮಂದಿ ಕೊನೆಯುಸಿರೆಳೆದಿದ್ದಾರೆ.

ಈಗ ಲಾಕ್‌ಡೌನ್ ನಡುವೆಯೂ ಮೀನು ಸವಿಯಬಹುದು..!

ಕೋವಿಡ್ 19 ಸೋಂಕಿನಿಂದ ಪ್ರತಿಶತ ಸಾವಿನ ಪ್ರಮಾಣ ಭಾರತದಲ್ಲಿ, 2.66% ಇದ್ದರೆ, ಜಾಗತಿಕ ಪ್ರಮಾಣ 5.58 ಇದೆ. ಆದರೆ ಮಹರಾಷ್ಟ್ರದಲ್ಲಿನ ಸಾವಿನ ಪ್ರಮಾಣ 6.2% ಇದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.