ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (BR Ambedkar) ಅವರಿಂದ ರಚಿಸಲ್ಪಟ್ಟಸಂವಿಧಾನ ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ.
ನವದೆಹಲಿ (ನ. 26): ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (BR Ambedkar) ಅವರಿಂದ ರಚಿಸಲ್ಪಟ್ಟ ಸಂವಿಧಾನ (Constitution) ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ನರೇಂದ್ರ ಮೋದಿಯವರು (PM Modi) ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ 2015ರಿಂದ ನವೆಂಬರ್ 26ನ್ನು ಸಂವಿಧಾನ ದಿವಸವನ್ನಾಗಿ (Constition day) ಆಚರಿಸಲು ಕರೆ ನೀಡಿದ್ದರು. ಇಂದು ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
" ಈ ದಿನ ಬಾಬಾ ಸಾಹೇಬ್ ಅಂಬೇಡ್ಕರ್, ರಾಜೇಂದ್ರ ಪ್ರಸಾದ್‌ರದ್ದು. ಈ ದಿನ ಈ ಸದನಕ್ಕೆ ನಮಸ್ಕರಿಸಬೇಕು. ಈ ಪವಿತ್ರ ಸ್ಥಳದಲ್ಲಿ ಹೋರಾಟಗಾರರು ಭಾರತದ ಭವಿಷ್ಯ ನಿರ್ಧರಿಸಿದರು. ಭಾರತ ವಿಭಜನೆಯ ಮಧ್ಯೆಯೂ ಎಲ್ಲರ ಎದೆಯಲ್ಲಿ ಒಂದೇ ಮಂತ್ರವಿತ್ತು. ಎಲ್ಲಾ ವೈವಿದ್ಯತೆಯ ಮಧ್ಯೆ ಒಂದು ಬಂಧನ ಬೇಕಾಗಿತ್ತು. ಸಂವಿಧಾನ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಂದು ಮಾಡಿ ಭಾರತ ನಿರ್ಮಿಸಿತು. ನಮ್ಮ ಸಂವಿಧಾನ ಕೇವಲ ಅನೇಕ ವೈವಿಧ್ಯತೆಯ ಸಂಗ್ರಹ ಮಾತ್ರವಲ್ಲ, ನಮ್ಮ ಸಹಸ್ರಾರು ವರ್ಷಗಳ ಪರಂಪರೆಯ ಆಧುನಿಕ ಅಭಿವ್ಯಕ್ತಿ' ಎಂದು ಪ್ರಧಾನಿ ಮೋದಿ ಹೇಳಿದರು.