ಬಂಧನವಾಗಿರುವ ಹುಬ್ಬಳ್ಳಿ ಗಲಭೆಕೋರರಿಗೆ ಜಾಮೀನು ಕೊಡಿಸಲು ಅಂಜುಮನ್ ಇಸ್ಲಾಮ್ ಸಂಸ್ಥೆ ತಯಾರಿ ನಡೆಸಿದ್ದರೆ, ಇತ್ತ ಶಾಸಕ ಜಮೀರ್ ಅಹಮ್ಮದ್, ಬಂಧಿತ ಕುಟುಂಬಸ್ಥರಿಗೆ ಫುಡ್ ಕಿಟ್ ಹಾಗೂ 5,000 ರೂಪಾಯಿ ದುಡ್ಡು ಹಂಚಿದ್ದಾರೆ. ಬಳಿಕ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇತ್ತ ದಿವ್ಯ ಹಾಗರಗಿ ಬಂಧನ, ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಸೇರಿದಂತೆ ಕರ್ನಾಟಕ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ.