Sep 9, 2022, 10:42 PM IST
12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶದ ಮೂಲಕ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸಾಗಲಿದೆ. ಪ್ರತಿ ದಿನ 25 ಕಿಲೋಮೀಟರ್‌ನಂತೆ 150 ದಿನ ಈ ಯಾತ್ರೆ ಸಾಗಲಿದೆ. ಛಿದ್ರಗೊಂಡಿರುವ ಭಾರತವನ್ನು ಒಂದುಗೂಡಿಸಲು ಯಾತ್ರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಇತ್ತ ಬಿಜೆಪಿ ನಾಳೆ ದೊಡ್ಡಬಳ್ಳಾಪುರದಲ್ಲಿ ಅತೀ ದೊಡ್ಡ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ. ದೊಡ್ಡಬಳ್ಳಾಪುರ ಸೇರಿದಂತೆ ಕರ್ನಾಟಕದ 7 ಕಡೆಗಳಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಯಾತ್ರೆ, ಸಮಾವೇಶ, ಕಾರ್ಯಕ್ರಮಗಳು ಹೆಚ್ಚಾಗತೊಡಗಿದೆ. ಇತ್ತ ಸುಪ್ರೀಂ ಕೋರ್ಟ್ ಪೂಜಾಸ್ಥಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಮ್ಮತಿಸಿದೆ. ಇಂದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.