Oct 25, 2022, 10:27 PM IST
ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾರುತಿ 800 ಕಾರು ಸ್ಫೋಟ ಪ್ರಕರಣ ಆರಂಭದಲ್ಲಿ ಸಿಲಿಂಡರ್ ಸ್ಫೋಟ ಎಂದು ಷರಾ ಬರೆಯಲಾಗಿತ್ತು.ಈ ಕಾರಿನಲ್ಲಿದ್ದ ಜುಮೇಜಾ ಮುಬೀನ್ ಸುಟ್ಟು ಕರಕಲಾಗಿದ್ದ. ಆದರೆ ತನಿಖೆಗೆ ಇಳಿದ ಪೊಲೀಸರಿಗೆ ಅಚ್ಚರಿಯಾಗಿದೆ. ಕಾರಣ ದೀಪಾವಳಿಗೆ ಆತ್ಮಾಹುತಿ ಕಾರು ದಾಳಿಗೆ ತಯಾರಿ ಮಾಡುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಅನ್ನೋದು ಇದೀಗ ಬಲವಾಗುತ್ತಿದೆ. ಜುಮೇಜಾ ಮುಬೀನ್ ಮನೆ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಹಲವು ಪೂರಕ ದಾಖಲೆಗಳು ಲಭ್ಯವಾಗಿದೆ. ಮೃತ ಜುಮೇಜಾ ಮುಬೀನ್‌ಗೆ ಐಸಿಸ್ ಲಿಂಕ್ ಬಯಲಾಗಿದೆ. ಸ್ಫೋಟದ ಹಿಂದೆ ಐಸಿಸ್ ಉಗ್ರರ ಲಿಂಕ್ ಪತ್ತೆಯಾಗಿದೆ. ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಮಾಹಿತಿಯೇನು?