ಕಾನೂನು ಸಚಿವ ರಿಜಿಜು ಡಾನ್ಸ್‌ಗೆ ಸಿಜೆಐ ರಮಣ ಶ್ಲಾಘನೆ!

Oct 4, 2021, 4:50 PM IST

ನವದೆಹಲಿ(ಸೆ.30): ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು(Kiren Rijiju) ಅರುಣಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಅಲ್ಲಿನ ಜಾನಪದ ಹಾಡಿಗೆ ಮಾಡಿದ್ದ ನೃತ್ಯ ಭಾರೀ ವೈರಲ್ ಆಗಿತ್ತು. ಅವರ ಈ ಸರಳತೆಗೆ, ಜನರೊಂದಿಗೆ ಬೆರೆಯುವ ನಡೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. ಖುದ್ದು ಪ್ರಧಾನಿ ಮೋದಿ ಕೂಡಾ ಕಾನೂನು ಸಚಿವ ರಿಜಿಜು ನೃತ್ಯಕ್ಕೆ ಮನಸೋತಿದ್ದರು. ಆದರೀಗ ಪಿಎಂ ಬೆನ್ನಲ್ಲೇ ಸುಪ್ರಿಂ ಮುಖ್ಯ ನ್ಯಾಯಮೂರ್ತಿ ಎನ್‌. ವಿ ರಮಣ ಕೂಡಾ ರಿಜಿಜುರನ್ನು ಹಾಡಿ ಹೊಗಳಿದ್ದಾರೆ.

ಹೌದು ಈ ಬ್ಗಗೆ ಮಾತನಾಡಿರುವ ಸಿಜೆಐ ರಮಣ 'ನಮ್ಮ ಕಾನೂನು ಸಚಿವರು ಅದೆಷ್ಟು ಕ್ರಿಯಾಶೀಲರೆಂದು ಎಲ್ಲರಿಗೂ ತಿಳಿದಿದೆ. ಜನರೊಂದಿಗಿನ ಸಂವಾದದ ವೇಳೆ ಅವರಲ್ಲೆಷ್ಟು ಉತ್ಸಾಹ ಇದೆ ಎಂದು ತಿಳಿಯುತ್ತದೆ. ಇತ್ತೀಚೆಗೆ ಟ್ವಿಟರ್‌ನಲ್ಲಿ ವೈರಲ್ ಆದ ಅವರ ನೃತ್ಯದ ಮಾಹಿತಿ ನನಗೂ ಸಿಕ್ಕಿದೆ. ಸಾಮಾನ್ಯ ಜನರೊಂದಿಗೆ ಅವರು ಬೆರೆಯುವ ರೀತಿ, ಸಮಾಜದೆಡೆ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆ' ಎಂದಿದ್ದಾರೆ.

ಅರುಣಾಚಲ ಪ್ರದೇಶ (Arunachal Pradesh)ದ ಕಝಲಾಂಗ್ ಗ್ರಾಮದ ಸಜೊಲಾಗ್‌ ಜನರು ತಮ್ಮ ಊರಿಗೆ ಬರುವ ಅತಿಥಿಗಳನ್ನು ಹಾಡು-ನೃತ್ಯದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸುತ್ತಾರೆ. ಅದೇ ರೀತಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಯ ಪ್ರಗತಿ ಪರಿಶೀಲಿಸಲು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆಗ ಅಲ್ಲಿನ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದರು. ಈ ವೇಳೆ ಸಾಂಪ್ರದಾಯಿಕ ಹಾಡಿಗೆ ಮನಸಾರೆ ಕುಣಿದು ಕುಪ್ಪ