Nov 28, 2024, 4:40 PM IST
2004 ರಲ್ಲಿ ಅಪ್ಪಳಿದ ಸುನಾಮಿ ಲಕ್ಷಾಂತರ ಜನರನ್ನ ಬಲಿ ಪಡೆದಿದ್ದನ್ನು ಯಾರೂ ಮರೆಯೋದಿಲ್ಲ ಬಿಡಿ. ಹಾಗೆನೇ ಮಿಲಿಯನ್ ಗಟ್ಟಳೇ ಜೀವಜಂತುಗಳು ತಮ್ಮ ಆಶ್ರಯತಾಣವನ್ನ, ಆಹಾರದ ಮೂಲಗಳನ್ನ ಕಳೆದುಕೊಂಡು ಅನಾಥವಾಗಿದ್ದವು. ಆದ್ರೆ ಅಂಥಾ ಕಷ್ಟದ ಸಮಯದಲ್ಲೇ ಅರಸಿಬಂದ ಗಿಳಿಗಳಿಗೆ ಜೋಸೆಫ್ ಅನ್ನದಾತನಾದ್ರು. ವಿಚಿತ್ರ ಅಂದ್ರೆ ನಾಲ್ಕು ಗಿಳಿಗಳು ತಮ್ಮ ಗೆಳೆಯರನ್ನ ಕರೆತರ್ತಾ ತರ್ತಾ, ಇವತ್ತು 6000 ಗಿಳಿಗಳ ಪಾಲಿಗೆ ಇವರು ಪೋಷಕನಾಗಿದ್ದಾರೆ.
ನಟ ಜಯಂ ರವಿ-ಆರತಿ ವಿಚ್ಛೇದನ: ಸಂಧಾನ ಸಭೆ ವಿಫಲ, ಕೇಸ್ ಮುಂದೂಡಿಕೆ
ಇದು ಒಂದು ದಿನ ಅಥವಾ ವಾರದ ಮಾತು ಅಲ್ಲವೇ ಅಲ್ಲ. ಜೋಸೆಫ್ ಶೇಖರ್ ಕಳೆದ 20 ವರ್ಷಗಳಿಂದ ಒಂದು ದಿನವೂ ತಪ್ಪದೇ ಈ ಕೆಲಸವನ್ನು ಮಾಡುತ್ತಿದ್ದಾರೆ. ಹಕ್ಕಿಗಳೇ ಮಕ್ಕಳೆಂದು ಭಾವಿಸಿರುವ ಜೋಸೆಫ್ ಅವುಗಳಿಗಾಗಿ ಕಳೆದ 20 ವರ್ಷಗಳಿಂದ ಏನೆಲ್ಲ ತ್ಯಾಗ ಮಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮಂಜು ಪಕ್ಷಪಾತ, ಪಾಸಿಟಿವ್ ಗೌತಮಿ ಪರ ನಿಂತು ನಾಮಿನೇಷನ್‌ನಿಂದ ಸೇವ್ ಮಾಡಿದ್ರಾ?
ಅನುದಿನವೂ 70 ಕೆಜಿ ಕಾಳುಗಳನ್ನ ತಂದು ಹಕ್ಕಿಗಳಿಗೆ ಹಾಕಲಿಕ್ಕೆ ಜೋಸೆಫ್ ಶೇಖರ್ ಏನೂ ಶ್ರೀಮಂತ ವ್ಯಕ್ತಿಯಲ್ಲ. ತನ್ನ ದುಡಿಮೆಯ ಬಹುತೇಕ ಭಾಗವನ್ನ ಹಕ್ಕಿಗಳಿಗಾಗೇ ಮೀಸಲಿಟ್ಟಿದ್ದಾರೆ. 20 ವರ್ಷದಿಂದ ಒಂದು ದಿನವೂ ರಜೆ ಪಡೆಯದೇ , ಈ ಥ್ಯಾಂಕ್ ಲೆಸ್ ಜಾಬ್ ಮಾಡ್ತಿದ್ದಾರೆ ಈ ಬರ್ಡ್ ಮ್ಯಾನ್. ಆದ್ರೀಗ ಮನೆ ಮಾಲೀಕರು ಮನೆ ಖಾಲಿ ಮಾಡಲು ಹೇಳಿದ್ದಾರೆ. ಮನೆ ಖಾಲಿ ಮಾಡದಿದ್ದರೆ ನೀವೆ ಕೊಂಡುಕೊಳ್ಳಿ ಎಂದು ಹೇಳಿದ್ದಾರೆ. 5 ಕೋಟಿ ಕೊಟ್ಟು ಕೊಂಡುಕೊಳ್ಳಲು ಅವರಿಂದ ಸಾಧ್ಯವಿಲ್ಲ. ಹಾಗಿದ್ರೆ ಮುಂದೇನು?