News Hour: ಚಂದ್ರನೂರಿಗೆ ಭಾರತದ ತೇರು, ಇನ್ನೇನಿದ್ದರು ಗಮನ ಆಗಸ್ಟ್‌ 23!

Jul 14, 2023, 11:30 PM IST

ಬೆಂಗಳೂರು (ಜು.14): ಇಸ್ರೋ ತನ್ನ ಬಹುನಿರೀಕ್ಷಿತ ಚಂದ್ರಯಾನದ ಜರ್ನಿಯನ್ನು ಆರಂಭ ಮಾಡಿದೆ. ಚಂದ್ರನಿಗೂ ಭೂಮಿಗೂ ಇರುವ ಅಂತರ 3.84 ಲಕ್ಷ ಕಿಲೋಮೀಟರ್‌. ಈ ಹಾದಿಯನ್ನು ಚಂದ್ರಯಾನ-3 ಹೇಗೆ ಕ್ರಮಿಸಲಿದೆ ಎನ್ನುವ ಕುತೂಹಲ ಇಲ್ಲಿದೆ.

ಆಗಸ್ಟ್‌ 23 ರಂದು ಸಂಜೆ 5.47ಕ್ಕೆ ಇಸ್ರೋ ತನ್ನ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಇಳಿಸುವುದಾಗಿ ಹೇಳಿದೆ. ವಿಕ್ರಮ್‌ ಲ್ಯಾಂಡರ್‌ ಏನೆಲ್ಲಾ ಹೊತ್ತೊಯ್ದಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಮುಖ್ಯವಾಗಿ ರೋವರ್‌. ಚಂದ್ರನ ನೆಲದಲ್ಲಿ ಈ ರೋವರ್‌ ಹೊರಬಂದಾಗ ಇಡೀ ಯೋಜನೆ ಯಶಸ್ಸು ಕಂಡಂತೆ ಎನ್ನುವುದು ನಿಜ.

ಇಸ್ರೋ ರಾಕೆಟ್‌ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ

ಚಂದ್ರನೂರಿಗೆ ತೆರಳುವ ನಿಟ್ಟಿನಲ್ಲಿ ಮೂರನೇ ಪ್ರಯತ್ನವಾಗಿ ಭಾರತದ ಚಂದ್ರಯಾನ-3 ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ.  ಅದರೊಂದಿಗೆ ವಿಶ್ವದ ಮುಂದೆ ಭಾರತದ ವಿಜ್ಞಾನಿಗಳು ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಿದ್ದಾರೆ.