Sep 8, 2022, 10:37 PM IST
ಬೆಂಗಳೂರು (ಸೆ.8): ಇತ್ತೀಚೆಗಷ್ಟೇ ನೌಕಾಪಡೆಯ ಧ್ವಜದಲ್ಲಿ ಸೇಂಟ್ ಜಾರ್ಜ್‌ನ ಕ್ರಾಸ್ ಬದಲಾಯಿಸಿದ್ದ ನರೇಂದ್ರ ಮೋದಿ ಅದೇ ಸ್ಥಳದಲ್ಲಿ ಗುಲಾಮಗಿರಿಯ ಯಾವುದೇ ಕುರುಹುಗಳನ್ನು ಉಳಿಸಬಾರದು ಎಂದು ಹೇಳಿದ್ದರು. ಅದರಂತೆ, ಗುರುವಾರ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಅವೆನ್ಯೂವನ್ನು ಪ್ರಧಾನಿ ಮೋದಿ ಲೋಕಾಪರ್ಣೆ ಮಾಡಿದ್ದು, ಶುಕ್ರವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ.
ಇದರ ಅನಾವರಣ ಸಂದರ್ಭದಲ್ಲಿ ಇಂಡಿಯಾಗೇಟ್‌ನಿಂದ ರಾಷ್ಟ್ರಪತಿ ಭವನದವರೆಗಿನ ಮಾರ್ಗದ ಹೆಸರನ್ನು ರಾಜಪಥದ ಬದಲಾಗಿ ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದರು. ಅಲ್ಲದೆ, ಇಂಡಿಯಾ ಗೇಟ್‌ನಲ್ಲಿನ 28 ಅಡಿ ಎತ್ತರದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನೂ ಮೋದಿ ಅನಾವರಣ ಮಾಡಿದರು. ಈ ಸ್ಥಳದಲ್ಲಿ ಹಿಂದೆ ಬ್ರಿಟಿಷ್ ದೊರೆಯ ಪ್ರತಿಮೆ ಇದ್ದವು.
ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್ ವಿಸ್ತಾ ಯೋಜನೆಯ ಕಾರ್ಮಿಕರಿಗೆ ಆಹ್ವಾನ: ಪ್ರಧಾನಿ ಮೋದಿ!
ಒಟ್ಟಾರೆ ಈ ಯೋಜನೆಗೆ 477 ಕೋಟಿ ವೆಚ್ಚವಾಗಿದೆ. ನವೀಕರಣಕ್ಕಾಗಿ 20 ತಿಂಗಳು ಕಾರ್ಮಿಕರು ಶ್ರಮ ವಹಿಸಿದ್ದಾರೆ. 3.9 ಲಕ್ಷ ಚದರ ಕಿಲೋಮೀಟರ್ ಹುಲ್ಲುಗಾವಲನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಹೊಸ ಸೆಂಟ್ರಲ್ ವಿಸ್ತಾದಲ್ಲಿ ಶೀಘ್ರದಲ್ಲಿಯೇ ನೂತನ ಸಂಸತ್ ಭವನ ಕೂಡ ಉದ್ಘಾಟನೆಯಾಗಲಿದೆ.