
ಬುಲೆಟ್ ಟ್ರೈನ್ ಯೋಜನೆಯು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಜಪಾನ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ಈ ಯೋಜನೆಯಲ್ಲಿ ದೇಶದ ಮೊದಲ ಸಮುದ್ರದೊಳಗಿನ ಸುರಂಗವೂ ಸೇರಿದ್ದು, ಇದು ಭಾರತದ ಆರ್ಥಿಕ ಭೂಪಟವನ್ನೇ ಬದಲಿಸುವ ನಿರೀಕ್ಷೆಯಿದೆ.
ಭಾರತ ಈಗ ಒಂದು ದೊಡ್ಡ ಕ್ರಾಂತಿ ಮಾಡೋಕೆ ನಿಂತಿದೆ.. ಅದು ಅತಿಂಥಾ ಕ್ರಾಂತಿ ಅಲ್ಲ.. ಟ್ರಾನ್ಸ್ಪೋರ್ಟೇಷನ್ ವಿಷಯದಲ್ಲಿ ನಡೀತಿರೋ ಬಿಗ್ಗೆಸ್ಟ್ ಟ್ರಾನ್ಸಿಷನ್.. ಅದೇ, ಬುಲೆಟ್ ಟ್ರೇನ್.. ಹೌದು ವೀಕ್ಷಕರೇ.. ನಾವು ಐದಾರು ವರ್ಷಗಳಿಂದ ಅದ್ಯಾವ ಅಭಿವೃದ್ಧಿ ಯೋಜನೆ ನೋಡ್ಬೇಕು ಅಂತ ಕಾಯ್ತಾ ಇದ್ವೋ, ಅದನ್ನ ನೋಡೋಕೆ ಟೈಮ್ ಬಂದೇ ಬಿಟ್ಟಿದೆ.. ದೇಶದ ಮೊಟ್ಟ ಮೊದಲ ಬುಲೆಟ್ ರೈಲಿನ ಅದ್ಭುತ ಯೋಜನೆ, ಮೋದಿ ಕಂಡಿದ್ದ ಅತಿ ದೊಡ್ಡ ಕನಸು, ನನಸಾಗೋಕೆ ದಿನಗಣನೆ ಶುರುವಾಗಿದೆ.