ಜಯಲಲಿತಾ ಬಳಿ ಎಷ್ಟು ಕೇಜಿ ಚಿನ್ನ ಬೆಳ್ಳಿ ಆಭರಣಗಳಿದ್ವು ಗೊತ್ತಾ?: ಆಭರಣ ಒಯ್ಯಲು 6 ಟ್ರಂಕ್‌ ತನ್ನಿ ಎಂದ ಕೋರ್ಟ್‌!

Feb 25, 2024, 12:33 PM IST

ನಟಿ ರಾಜಕಾರಣಿ ದಿವಂಗತ ಜಯಲಲಿತಾ ಅವರ ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಏನಾಯ್ತು.? ಜಯಲಲಿತಾ ನಿಧನ ನಂತರ ಅವರ ಟನ್ ಗಟ್ಟಲೆ ಚಿನ್ನಾಭರಣ ಯಾರ ವಶವಾಯ್ತು.? ಇದಕ್ಕೆ ಇಷ್ಟು ದಿನ ಉತ್ತರ ಸಿಕ್ಕಿರಲಿಲ್ಲ. ಆದ್ರೆ ಈಗ ಜಯಲಿತಾ ಚಿನ್ನಾಭರಣದ ವಿಷಯ ತಮಿಳುನಾಡಿನಲ್ಲಿ ಭಾರಿ ಸುದ್ದಿಯಾಯ್ತಿದೆ. ಜಯಲಲಿತಾ ಅವರ ಕೋಟಿ ಕೋಟಿ ಬೆಲೆ ಬಾಳೋ ಚಿನ್ನಾಭರವಣವನ್ನ ತೆಗೆದುಕೊಂಡು ಹೋಗಿ ಅಂತ ತಮಿಳು ನಾಡು ಸರ್ಕಾರಕ್ಕೆ ವಿಶೇಷ ಸಿಬಿಐ ಕೋರ್ಟ್‌ ಹೇಳಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನ 2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿ  ಚೆನ್ನೈ ಪೊಲೀಸರು ಬಂಧಿಸಿದ್ರು. ರಾಜ್ಯದ ಹೊರಗಡೆ ವಿಚಾರಣೆ ನಡೆಸಬೇಕು ಎಂಬ ಬೇಡಿಕೆಯಿಂದ ಬೆಂಗಳೂರಿನಲ್ಲಿ ವಿಚಾರಣೆ ಮಾಡಿ ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. 

ಆ ವೇಳೆ ವಶಪಡಿಸಿಕೊಂಡಿದ್ದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಮರಳಿಸಲು ರಾಜ್ಯದ ವಿಶೇಷ ಸಿಬಿಐ ಕೋರ್ಟ್‌ ದಿನ ನಿಗದಿ ಮಾಡಿದೆ. ಟನ್‌ ಗಟ್ಟಲೆ ಆಭರಣಗಳ ಹಸ್ತಾಂತರ ಮಾರ್ಚ್‌ 6 ಮತ್ತು 7ರಂದು ನಡೆಯಲಿದೆ. ಅದಕ್ಕಾಗಿ ಆಭರಣಗಳನ್ನು ಕೊಂಡೊಯ್ಯಲು ಆರು ದೊಡ್ಡ ಟ್ರಂಕ್‌ ಮತ್ತು ಅಗತ್ಯ ಭದ್ರತೆಯೊಂದಿಗೆ ಬರುವಂತೆ ಕೋರ್ಟ್​ ಹೇಳಿದೆ. ನಟಿ ರಾಜಕಾರಣಿ ದಿವಗಂತ ಜಯಲಲಿತಾ 31ನೇ ವಯಸ್ಸಿಗೆ ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಕಾಲಿಟ್ರು. ಜಯಲಲಿತಾ ಸಾಯೋ ಹೊತ್ತಿಗೆ ಇವರ ಬಳಿ ಏಳು ಕೆಜಿ 40 ಗ್ರಾಂನ 468 ಬಗೆಯ ವಜ್ರ ಖಚಿತ  ಚಿನ್ನಾಭರಣ ಇತ್ತು. ಇದರ ಜೊತೆಗೆ 700 ಕೆ ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 3 ಐರನ್ ಲಾಕರ್, ಸೇರಿ 1,93,202 ರೂಪಾಯಿ ನಗದು ಹಣ ಇತ್ತು. ಈಗ ಇದನ್ನೆಲ್ಲಾ ತಮಿಳು ನಾಡು ಸರ್ಕಾರಕ್ಕೆ ಮರಳಿಸಲಾಗುತ್ತಿದೆ.