May 24, 2021, 10:56 AM IST
ಬೆಂಗಳೂರು (ಮೇ. 24): ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ಆಕ್ಸಿಜನ್ ಕಾರಣ ಎನ್ನಲಾಗುತ್ತಿದೆ. ಆಕ್ಸಿಜನ್‌ನಿಂದಲೇ ಬ್ಲ್ಯಾಕ್ ಫಂಗಸ್ ದೇಹ ಪ್ರವೇಶಿಸುತ್ತಿದೆಯಂತೆ. ಕೊರೊನಾ ಸೋಂಕಿತ ತೀವ್ರತೆ ಹೆಚ್ಚದಾಗ ಆಕ್ಸಿಜನ್‌ಗೆ ಹಾಹಾಕಾರ ಎದುರಾಯಿತು. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ದುರಂತ ಕಣ್ಣೇದುರೇ ಇದೆ. ಇಂತಹ ಸಂದರ್ಭದಲ್ಲಿ ಇಂಡಸ್ಟ್ರಿಯಲ್ ಆಕ್ಸಿಜನ್‌ನ್ನು ರೋಗಿಗಳಿಗೆ ನೀಡಲಾಯಿತು. ಈ ಆಕ್ಸಿಜನ್ ತಯಾರಿಕೆಗೆ ಬಳಸುವ ಅಂಶಗಳೇ ಬ್ಲ್ಯಾಕ್ ಫಂಗಸ್‌ಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದಾರೆ. ಹೇಗೆ ಇದು ಕಾರಣ..? ವೈದ್ಯರ ವಿವರಣೆ ಏನು..?