CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

Published : Dec 09, 2021, 02:02 PM ISTUpdated : Dec 09, 2021, 02:39 PM IST

ಸಿಡಿಎಸ್‌ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ವೆಲ್ಲಿಂಗ್ಟನ್(ಡಿ.09): ಸಿಡಿಎಸ್‌ ಬಿಪಿನ್ ರಾವತ್ (Chief of Defence Staff General Bipin Rawat) ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ (Black Box) ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ಹೌದು ನೀಲಗಿರಿ ದಟ್ಟಾರಣ್ಯದಲ್ಲಿ (Nilgiri hills of Tamil Nadu) ಬ್ಲಾಕ್‌ ಬಾಕ್ಸ್‌ ಪತ್ತೆಯಾಗಿದೆ. ಸತತ ಕಾರ್ಯಾಚರಣೆ ಬಳಿಕ, 40 ಯೋಧರ ತಂಡ ಕೊನೆಗೂ ಇದನ್ನು ಇಂದು ಪತ್ತೆ ಹಚ್ಚಿದೆ. ಇಷ್ಟು ಸುರಕ್ಷಿತವಾಗಿರುವ ಹೆಲಿಕಾಪ್ಟರ್ ದುರಂತವಾಗಲು ಹೇಗೆ ಸಾಧ್ಯ ಎಂಬ ಸೀಕ್ರೆಟ್‌ ಇನ್ನು ಈ ಬ್ಲಾಕ್‌ ಬಾಕ್ಸ್‌ ಅಷ್ಟೇ ಹೊರಕಾಹಬಲ್ಲದು. ದುರಂತದ ಬಳಿಕ ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಶತ್ರು ರಾಷ್ಟ್ರಗಳ ಹುನ್ನಾರವಿರಬಹುದೆಂಬ ಅನುಮಾನಗಳೂ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲೂ ಬ್ಲಾಕ್‌ ಬಾಕ್ಸ್‌ನಲ್ಲಿರುವ ಮಾಹಿತಿ ಬಹಳ ಮಹತ್ವ ಪಡೆಯುತ್ತದೆ. 

ಹೆಲಿಕಾಪ್ಟರ್‌ನ ಹಾರಾಟದ ಮಾಹಿತಿ, ನಿಯಂತ್ರಕರೊಂದಿಗೆ ಪೈಲಟ್‌ನ ಮಾತು, ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆ, ಹವಾಮಾನ ಮಾಹಿತಿ ಎಲ್ಲವೂ ಈ ಬ್ಲ್ಯಾಕ್‌ ಬಾಕ್ಸ್‌ನಲ್ಲಿ ಇರಲಿದೆ

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more