Jan 26, 2021, 5:42 PM IST
ನವದೆಹಲಿ (ಜ. 26): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕೆಂಪುಕೋಟೆ ಮೇಲೆ ಸಿಖ್ ಬಾವುಟವನ್ನು ಹಾರಿಸಿದ್ದಾರೆ. ಈ ಹೋರಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಗಣತಂತ್ರದಂದು ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತನ ಕಿಚ್ಚ: ರೈತನ ಕೋಪಕ್ಕೆ ಪೊಲೀಸರು ತತ್ತರ!
'ಸರ್ಕಾರ ರೈತರ ಜೊತೆ ಸಂಧಾನ ನಡೆಸಿದೆ. ಒಂದೂವರೆ ವರ್ಷದವರೆಗೆ ಕೃಷಿ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ, ರೈತರು ಈ ರೀತಿ ದಂಗೆ ಏಳುತ್ತಾರೆ ಅಂದರೆ ಇದರ ಹಿಂದೆ ದೇಶ ವಿರೋಧಿಗಳ ಷಡ್ಯಂತ್ರವಿದೆ. ಕೆಲವರ ಕೈವಾಡವಿದೆ. ಇವರೆಲ್ಲರಿಗೂ ಸಿಂಹಸ್ವಪ್ನ ಪ್ರಧಾನಿ ಮೋದಿ. ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತದೆ' ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ಹೇಳಿದ್ದಾರೆ.