ರಾಮ ಮಂದಿರ ದುಡ್ಡಲ್ಲಿ ಎಷ್ಟು ಮಕ್ಕಳಿಗೆ ಶಿಕ್ಷಣ ಸಿಗುತಿತ್ತು? ಪ್ರಶ್ನಿಸಿ ಟ್ರೋಲ್ ಆದ ತೇಜಸ್ವಿ ಯಾದವ್!

Jan 5, 2024, 11:31 PM IST

ರಾಮ ಮಂದಿರ ಉದ್ಘಾಟನೆಗೂ ಮುನ್ನ ಭಾರೀ ರಾಜಕೀಯ ನಡೆಯುತ್ತಿದೆ. ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಹಳೇ ಕೇಸ್ ರಿ ಓಪನ್ ಹೋರಾಟ ನಡೆಯುತ್ತಿದೆ. ವಿವಿಧ ರಾಜ್ಯಗಳಲ್ಲಿ ರಾಮ ಮಂದಿರ ಉದ್ಘಾಟನೆ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಇದರ ನಡುವೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಕೆಲ  ಪ್ರಶ್ನೆಗಳನ್ನು ಎತ್ತಿ ನಗೆಪಾಟಲಿಗೀಡಾಗಿದ್ದಾರೆ.ರಾಮ ಮಂದಿರ ದುಡ್ಡಲ್ಲಿ ಎಷ್ಟು ಮಕ್ಕಳಿಗೆ ಶಿಕ್ಷಣ ಸಿಗುತ್ತಿತ್ತು? ಹಸಿವಾದರೆ, ಆರೋಗ್ಯ ಹದಗೆಟ್ಟರೇ ರಾಮ ಮಂದಿರಕ್ಕೆ ಹೋಗುತ್ತೀರಾ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ತೇಜಸ್ವಿ ಯಾದವ್ ವಿರುದ್ಧ ಭಾರಿ ಆಕ್ರೋಶದ ಜೊತೆಗೆ ಟ್ರೋಲ್ ಕೂಡ ಮಾಡಲಾಗುತ್ತಿದೆ. ರಾಮ ಮಂದಿರ ಭಕ್ತರ ದೇಣಿಗೆ ದುಡ್ಡಿನಲ್ಲಿ ಕಟ್ಟಲಾಗಿದೆ. ಇದು ಸರ್ಕಾರದ ದುಡ್ಡಲ್ಲ ಎಂದು ಕೆಲವರು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.