Jan 25, 2023, 11:32 PM IST
ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ ಭಾರತದಲ್ಲಿ ಕೋಲಾಹಲ ಸೃಷ್ಟಿಸಿದೆ. ಮೋದಿ ಸೂಚನೆಯಂತೆ ಗುಜರಾತ್ ಗಲಭೆ ನಡೆದಿದೆ. ಮುಸ್ಲಿಮರ ವಿರುದ್ದ ದೌರ್ಜನ್ಯ ನಡೆಯುತ್ತಿದೆ. ಆರ್ಟಿಕಲ್ 370 ರದ್ದು, ಸಿಎಎ ಮುಸ್ಲಿಮ್ ವಿರೋಧಿ ನಿಲುವು ಎಂದು ಬಿಬಿಸಿ ಹೇಳಿದೆ. ಇದಕ್ಕೆ ಭಾರತದಲ್ಲಿ ಕೆಲ ಪಕ್ಷ ಹಾಗೂ ಸಂಘಟನೆಗಳು ಬೆಂಬಲ ನೀಡಿದೆ. ಸುದೀರ್ಘ ಆಳ್ವಿಕೆಯ ಪೈಕಿ 40 ವರ್ಷದ ಬ್ರಿಟಿಷರ ಆಡಳಿತದಲ್ಲಿ ಭಾರತದಲ್ಲಿ ಹದಿನಾರುವರೆ ಕೋಟಿ ಜನರ ಸಾವಿಗೆ ಕಾರಣವಾಗಿದ್ದ ಬ್ರಿಟಿಷರು ಇದೀಗ ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಮೋದಿ ಹಾಗೂ ಭಾರತ ವಿರುದ್ಧದ ಪಿತೂರಿಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದ್ದರೆ, 249 ಮಂದಿ ಶಿಕ್ಷೆ ಪ್ರಕಟಿಸಿದೆ. ಆದರೆ ಇದ್ಯಾವುದನ್ನು ಪರಿಗಣಿಸಿದ ಬಿಬಿಸಿ ಭಾರತ ವಿರೋಧಿ ಪಿತೂರಿ ನಡೆಸಿದೆ.