ನವದೆಹಲಿ (ನ.08): ಇಡೀ ದೇಶವೇ ಎದುರು ನೋಡುತ್ತಿರುವ ಬಾಬ್ರಿ ಮಸೀದಿ- ರಾಮ ಮಂದಿರ ವಿವಾದದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆ ವಿವಾದದ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಮುಂದಿನ ಬುಧವಾರ ತೀರ್ಪು ಪ್ರಕಟಿಸುವ ಬಹುತೇಕ ಸಾಧ್ಯತೆಗಳಿವೆ. ಸುಮಾರು 9 ವರ್ಷಗಳ ಕಾಲ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದ ಈ ಅಯೋಧ್ಯೆ ವ್ಯಾಜ್ಯವನ್ನು ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪಂಚಪೀಠ ವಿಚಾರಣೆ ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.ನ್ಯಾ.ಗೊಗೊಯಿ ಇದೇ ತಿಂಗಳು (ನ.17) ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ತೀರ್ಪು ಹೊರಬೀಳಲಿದೆ. ಅಯೋಧ್ಯೆ ವಿವಾದ- ಹಿನ್ನೋಟ:"