Dec 9, 2021, 6:16 PM IST
ನವದೆಹಲಿ(ಡಿ.09): ಬಿಪಿನ್ ರಾವತ್ ಈ ಒಂದು ಹೆಸರು ಕೇಳಿದ್ರೆ ಭಯೋತ್ಪಾದಕರ ಗುಂಡಿಗೆ ನಡುಗುತ್ತಿತ್ತು. ಇವರು ಗುಡುಗಿದ್ರೆ ಉಗ್ರರು ಅಕ್ಷರಶಃ ಪತರುಗುಡುತ್ತಿದ್ದರು. ಆದರೆ ದೇಶದ ಮೊದಲ ಸೇನಾ ಪ್ರಧಾನ ದಂಡ ನಾಯಕ ಜನರಲ್ ಬಿಪಿನ್ ರಾವತ್ ಇನ್ನು ನೆನಪು ಮಾತ್ರ. ಹೆಲಿಕಾಪ್ಟರ್ ದುರಂತದಲ್ಲಿ ರಾವತ್ ಮೃತಪಟ್ಟಿದ್ದಾರೆ. ಈ ವರ್ಷದಲ್ಲಿ ಆಗಿ ಹೋದ ಅತ್ಯಂತ ಕೆಟ್ಟ ದುರಂತವಿದು. ದುರ್ಮರಣ ಹೊಂದಿದ್ದ ಬಿಪಿನ್ ರಾವತ್ ಹೇಗಿದ್ರು? ನಮ್ಮ ಭಾರತೀಯ ಸೇನೆಗಾದ ನಷ್ಟ ಎಂತದ್ದು? ಸಾವಿಲ್ಲದ ಸೈನಿಕನ ಜೀವನ, ಮಿಂಚಿನ ಮಾತುಗಳು....
ಬಿಪಿನ್ ರಾವತ್ ಅದೊಂದು ವ್ಯಕ್ತಿಯ ಹೆಸರಲ್ಲ, ಅವರೊಂದು ಶಕ್ತಿ. ಶತ್ರುಗಳ ವ್ಯೂಹ ಬೇಧಿಸುವ ಎದೆಗಾರಿಕೆ ಅವರಲ್ಲಿತ್ತು. ರಾವತ್ ಇದ್ದಾರೆಂಬ ಒಂದೇ ಒಂದು ಕಾರಣಕ್ಕೆ ದೊಡ್ಡ ದೊಡ್ಡ ದೇಶಗಳು ಬಾಲ ಬಿಚ್ಚೋದಿಕ್ಕೆ ಹಿಂದೆ ಮುಂದೆ ನೋಡುತ್ತಿದ್ದವು. ಅಂತಹವರ ದುರಂತ ನಿಜಕ್ಕೂ ಘೋರ. ರಾವತ್ ಕುರಿತು ನಿಮಗೆ ತಿಳಿಯದ ಸಂಗತಿಗಳು ಹೀಗಿವೆ ನೋಡಿ