Feb 15, 2022, 3:58 PM IST
ಲಕ್ನೋ(ಫೆ.15): ಒಂದೆಡೆ ಹಿಜಾಬ್ ಗಲಾಟೆ ದಿನೇ ದಿನೇ ಜೋರಾಗುತ್ತಿದೆ. ಕೋರ್ಟ್‌ನಿಂದ ಮಧ್ಯಂತರ ಆದೇಶ ಬಂದರೂ ಹಿಜಾಬ್ ವಿವಾದದ ಗೊಂದಲಕ್ಕೆ ತೆರೆ ಬಿದ್ದಿಲ್ಲ. ಅದು ವಿದ್ಯಾರ್ಥಿಗಳ ಮಧ್ಯೆ ಬಹಳಷ್ಟು ಅಂತರ ಉಂಟು ಮಾಡುತ್ತಿದೆ. ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಇನ್ನೊಂದೆಡೆ ಭಾರತವನ್ನು ಇಸ್ಲಾಂ ದೇಶ ಮಾಡುವ ಹುನ್ನಾರ ಸದ್ದಿಲ್ಲದೇ ನಡೆಯುತ್ತಿದೆ. ಇದಕ್ಕಾಗಿ ಅನೇಕ ಮುಸ್ಲಿಂ ರಾಷ್ಟ್ರಗಳು ಹಗಲಿರುಳೆನ್ನದೇ ಶ್ರಮ ವಹಿಸುತ್ತಿದ್ದಾರೆ. ಈಗ ಯೋಗಿ ಆದಿತ್ಯನಾಥ್ ಅವರ ಒಂದೇ ಒಂದು ಹೇಳಿಕೆಯಿಂದ ಘಜ್ವ ಇ ಹಿಂದ್ ಅನ್ನೋ ಧರ್ಮ ರಹಸ್ಯದ ಬಗ್ಗೆ ತುಂಬಾ ಚರ್ಚೆಗಳು ಶುರುವಾಗಿದೆ. ಅಷ್ಟಕ್ಕೂ ಏನಿದು ಘಜ್ವ ಇ ಹಿಂದ್? ಇದರಿಂದ ಭಾರತಕ್ಕಾಗುವ ಅಪಾಯವೇನು? ಇದನ್ನು ಇಸ್ಲಾಂ ಮೂಲಭೂತವಾದಿಗಳು ಸಾಧಿಸಿದ್ರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ವಿವರ