ಪಾಕ್‌ ಜೊತೆಗಲ್ಲ, ಕಾಶ್ಮೀರಿ ಯುವಕರ ಜೊತೆ ಅಮಿತ್ ಶಾ ಮಾತು: ಏನಿದರ ರಹಸ್ಯ?

Oct 27, 2021, 4:20 PM IST

ನವದೆಹಲಿ(ಅ.27): ಬುಲೆಟ್‌ ಪ್ರೂಫ್‌ ಕವರ್ ಇಲ್ಲ. ಸೆಕ್ಯುರಿಟಿ ಕೂಡಾ ಇಲ್ಲ. ಉಗ್ರ ಕಣಿವೆಯಲ್ಲಿ ಅಮಿತ್ ಶಾ ವೀರ ವಿಹಾರ. ಪಾಕ್‌ ಜೊತರೆಗಲ್ಲ, ಕಾಶ್ಮೀರಿ ಯುವಕರ ಜೊತೆ ಅಮಿತ್ ಶಾ ಮಾತುಕತೆ. ಏನಿದರ ಗುಟ್ಟು? ಪುಲ್ವಾಮಾ ದಾಳಿ ನಡೆದ ಸ್ಥಳದಲ್ಲೇ ಬಿಡಾರ ಹೂಡಿದ್ದೇಕೆ ಗೃಹ ಸಚಿವರು?

ಹೌದು 3 ದಿನಗಳ ಕಾಶ್ಮೀರ ಭೇಟಿಗಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಬಲಿಯಾದ 40 ಸಿಆರ್‌ಪಿಎಫ್‌ ಯೋಧರಿಗೆ ವಿಶೇಷವಾದ ಗೌರವ ಸಲ್ಲಿಸಿದ್ದಾರೆ.

ಅಮಿತ್‌ ಶಾ ಸೋಮವಾರ ಪುಲ್ವಾಮಾದ ಲೇತ್‌ಪೋರಾದಲ್ಲಿರುವ ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲೇ ಯೋಧರ ಜೊತೆ ಉಳಿದುಕೊಂಡು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ವಾಸ್ತವವಾಗಿ ಶಾ ಸೋಮವಾರವೇ ದೆಹಲಿಗೆ ಮರಳಬೇಕಿತ್ತು. ಆದರೆ ಕ್ಯಾಂಪ್‌ನಲ್ಲಿ ಉಳಿದು ನಿಮ್ಮ ಜೊತೆ ನಾವಿದ್ದೇವೆ ಎಂದು ಯೋಧರಿಗೆ ಭರವಸೆ ನೀಡುವ ಜೊತೆಗೆ, ಉಗ್ರರಿಗೆ ತಕ್ಕ ಸಂದೇಶ ರವಾನಿಸು ಸಲುವಾಗಿ ಸೋಮವಾರ ಕಾಶ್ಮೀರದಲ್ಲೇ ಉಳಿದುಕೊಂಡ ಅಮಿತ್‌ ಶಾ, ಸಿಆರ್‌ಪಿಎಫ್‌ ಕ್ಯಾಂಪ್‌ನಲ್ಲಿ ರಾತ್ರಿ ಯೋಧರ ಜೊತೆ ತಂಗಿದರು.