ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ. ಯುಪಿಯಲ್ಲಿ ಯಾರು ಅಧಿಕಾರದ ಗದ್ದುಗೆ ಏರುತ್ತಾರೆ? ಅನ್ನೋ ಕುತೂಹಲಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಬಹಿರಂಗವಾಗಿದೆ. ಇದಕ್ಕೆ ಕಾರಣವೂ ಇದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹಲವು ವಿಚಾರಗಳಲ್ಲಿ ಇತರರಿಗಿಂತ ಮುಂದಿದ್ದಾರೆ. ಅದರಲ್ಲೂ ಕಾನೂನು ಸುವ್ಯವಸ್ಥೆಯಲ್ಲಿ ಯೋಗಿ ಆದಿತ್ಯನಾಥ್ ಇತರ ಎಲ್ಲಾ ಸರ್ಕಾರಕ್ಕಿಂತ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂಬುದು ಜನರ ಅಭಿಪ್ರಾಯ. ಉತ್ತರದಲ್ಲಿ ಯೋಗಿಯನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ನೋಡ ಬಯಸುವ ಮಂದಿ ಹೆಚ್ಚಿದ್ದಾರೆ. ಹೀಗಾಗಿ 2022ರ ಚುನಾವಣೆ ಬಿಜೆಪಿಗೆ ಸಿಹಿ ನೀಡಲಿದೆ. ಆದರೆ ಅಖಿಲೇಶ್ ಯಾದವ್ ಅಷ್ಟೇ ಪೈಪೋಟಿ ನೀಡುವುದು ಸತ್ಯ.
ನರೇಂದ್ರ ಮೋದಿ ಅಲೆ, ಯೋಗಿ ಸರ್ಕಾರದ ಆಡಳಿತ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ತರಲಿದೆ ಅನ್ನೋದು ಸಮೀಕ್ಷೆ ಅಂಕಿ ಅಂಶಗಳು ಹೇಳುತ್ತಿದೆ. ಆದರೆ ಈ ಹಾದಿ ಸುಲಭವಲ್ಲ. ಕಾರಣ ಯೋಗಿ ಸರ್ಕಾರದ ಮುಂದೆ ಕಲೆ ಸವಾಲುಗಳು ಇವೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ಸಂಪೂರ್ಣ ಮಾಹಿತಿ ಇಲ್ಲಿದೆ.