Interview: ಅಗ್ನಿಪಥ್‌ ಸ್ಕೀಂ ಹಾಗೂ ರಾಹುಲ್ ಇಡಿ ಕೇಸ್: ಬಹಳಷ್ಟು ವಿಚಾರ ಮಾತನಾಡಿದ ಓಂ ಬಿರ್ಲಾ

Jun 21, 2022, 3:55 PM IST

ನವದೆಹಲಿ(ಜೂ.21): 17ನೇ ಲೋಕಸಭೆ ಮೂರು ವರ್ಷ ಪೂರೈಸಲಿದೆ. ಈ ಬಾರಿಯ ಲೋಕಸಭೆ ಹಲವು ರೀತಿಯಲ್ಲಿ ವಿಶೇಷವಾಗಿದೆ. ಈ ಮೂರು ವರ್ಷಗಳಲ್ಲಿ ಎಲ್ಲಾ ಬಿಲ್ ಅಥವಾ ಮಸೂದೆಗಳು ಅಂಗೀಕರಿಸಲ್ಪಟ್ಟವು. ಹಲವರು ಸದನದಲ್ಲಿ ಗದ್ದಲ ನಡೆಸಿದ್ದಾರೆ. ಹೀಗಿರುವಾಗಲೇ 2022ರ ಮುಂಗಾರು ಅಧಿವೇಶನದ ತಯಾರಿಯೂ ಆರಂಭವಾಗಿದೆ ಎಂಬುವುದು ಉಲ್ಲೇಲೇಖನೀಯ.

ಇನ್ನು ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ಗೆ ಸಂಬಂಧಿಸಿದಂತೆ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಸಾಕಷ್ಟು ಗದ್ದಲ ಉಂಟಾಗಬಹುದು. ಈ ಅಧಿವೇಶನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ನಡೆಯಬೇಕಿದೆ. ಲೋಕಸಭೆಯ ಕಾರ್ಯವೈಖರಿ, ಮೂರು ವರ್ಷಗಳ ಸಾಧನೆಗಳ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಏಷ್ಯಾನೆಟ್ ನ್ಯೂಸ್ ಬಹಳ ವಿವರವಾಗಿ ಚರ್ಚಿಸಿದೆ. ಸಂಭಾಷಣೆಯ ಮುಖ್ಯಾಂಶಗಳು ಇಲ್ಲಿವೆ.