Mar 31, 2022, 5:51 PM IST
ಶ್ರೀನಗರ(ಮಾ.31): ಕಾಶ್ಮೀರಿ ಪಂಡಿತರ ನರಮೇಧದ ನರ ರಾಕ್ಷಸನಿಗೆ ಖೆಡ್ಡಾ. ಕಾಶ್ಮೀರ್ ಫೈಲ್ಸ್ ಸಿನಿಮಾ ಕೊಟ್ಟ ಧೈರ್ಯ ಪರಮಪಾಪಿಗೆ ಶಿಕ್ಷೆ ಕೊಡಿಸಲು ಕಾಶ್ಮೀರ ಕೋರ್ಟ್ ಮೆಟ್ಟಿಲೇರಿದ ಪಂಡಿತ ಕುಟುಂಬ. 31 ವರ್ಷಗಳ ಹಿಂದಿನ ಘಟನೆಗೆ ಮರುಜೀವ ಕೊಟ್ಟದ್ದು ಹೇಗೆ ಈ ಸಿನಿಮಾ?
ಒಂದು ಸಿನಿಮಾ ಏನೆಲ್ಲಾ ಮಾಡಬಹುದು? ಜಜನರಲ್ಲಿ ಎಷ್ಟು ಧೈರ್ಯ ತುಂಬಬಹುದು ಎನ್ನುವುದಕ್ಕೆ ಕಾಶ್ಮೀರ ಫೈಲ್ಸ್ ಒಂದು ಉತ್ತಮ ಉದಾಹರಣೆ. ಇಷ್ಟು ವರ್ಷಗಳ ಕಾಲ ತಮ್ಮ ನೋವನ್ನು ನುಂಗಿದ್ದ ಇಲ್ಲಿನ ಪಂಡಿತ ಕುಟುಂಬವೊಂದು ತಮ್ಮ ನೋವಿಗೆ ಕಾರಣಕರ್ತನಾದವನಿಗೆ ಶಿಕ್ಷೆ ಕೊಡಲು ಕೋರ್ಟ್ ಮೆಟ್ಟಿಲೇರಿದೆ.