Punjab: 1984 ರ ಸಿಖ್ ಹತ್ಯಾಕಾಂಡ ಪ್ರಸ್ತಾಪ, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

Feb 15, 2022, 4:52 PM IST

1984 ರಲ್ಲಿ ನಡೆದ ಸಿಖ್ ಹತ್ಯಾಕಾಂಡ ಪಂಜಾಬ್ ರಣಕಣದಲ್ಲಿ ಸದ್ದು ಮಾಡುತ್ತಿದೆ. ಪಂಜಾಬ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸುವಾಗ, 1984 ರ ಸಿಖ್ ಗಲಭೆಯನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ಸಿಗರೇ ನೀವು ಅಮಾಯಕ ಸಿಖ್‌ರನ್ನು ಹತ್ಯೆ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ' ಎನ್ನುವ ಮೂಲಕ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡರು. 

ಭಾರತವನ್ನು ಘಜ್ವ ಇ ಹಿಂದ್ ಮಾಡಲು ಬಿಡುವುದಿಲ್ಲ: ಘರ್ಜಿಸಿದ ಯೋಗಿ ಆದಿತ್ಯನಾಥ್!

ಹಾಲಿ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ‘ಎನ್‌ಡಿಎ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ. ತನ್ಮೂಲಕ ರಾಜ್ಯದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲಿದೆ. ಡ್ರಗ್ಸ್‌ ಮುಕ್ತ ಹಾಗೂ ಸಾಲ ಮುಕ್ತ ಹೊಸ ಪಂಜಾಬ್‌ ನಿರ್ಮಿಸುತ್ತೇವೆ’ ಎಂದು ಭವಿಷ್ಯ ನುಡಿದಿದ್ದಾರೆ.