ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸುವ ಸಲುವಾಗಿ ವಿಪಕ್ಷಗಳು ಮಾಡಿಕೊಂಡ ಘಟಬಂದನ್ ಐಎನ್‌ಡಿಐಎ ಮೈತ್ರಿಕೂಟಕ್ಕೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮೈತ್ರಿಯಿಂದ ಹೊರಹೋಗುವ ಸಾಧ್ಯತೆ ಇದೆ.
ನವದೆಹಲಿ (ಆ.16): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಎಪಿ ಜತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನಲ್ಲಿಯೇ ಅಪಸ್ವರ ಎದುರಾಗಿದೆ. ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದ ಬೆನ್ನಲ್ಲಿಯೇ, ಐಎನ್‌ಡಿಐಎ ಮೈತ್ರಿಕೂಟದಲ್ಲಿ ಇರುವುದು ಸಮಯ ವ್ಯರ್ಥ ಮಾಡಿದಂತೆ ಎಂದು ಆಪ್ ಹೇಳಿದೆ.
ಅದರೊಂದಿಗೆ ‘ಇಂಡಿಯಾ’ ಮೈತ್ರಿಕೂಟಕ್ಕೆ ದೆಹಲಿಯಲ್ಲೇ ಭಾರಿ ಹಿನ್ನಡೆ ಎದುರಾಗಿದೆ. ದೆಹಲಿ ಕಾಂಗ್ರೆಸ್ ನಾಯಕರ ಜತೆ ಆಪ್ ಜೊತೆ ಮೈತ್ರಿ ವಿಚಾರವಾಗಿ ಖರ್ಗೆ ಹಾಗೂ ರಾಹುಲ್ ಸಭೆ ನಡೆಸಿದ್ದಾರೆ. ಮೊದಲ ಸಭೆಯಲ್ಲಿ ಆಪ್ ಜತೆ ಮೈತ್ರಿ ಬಗ್ಗೆ ಒಮ್ಮತ ಮೂಡಿಲ್ಲ. ದೆಹಲಿಯ 7 ಕ್ಷೇತ್ರಗಳ ಹಂಚಿಕೆಯಲ್ಲೇ ಭಾರೀ ಭಿನ್ನಮತ ಎದುರಾಗಿದೆ.
ಎಎಪಿಗೆ ಕ್ಷೇತ್ರ ಬಿಟ್ಟುಕೊಡೋ ವಿಚಾರದಲ್ಲಿ ಭಿನ್ನಾಭಿಪ್ರಾಯ ಎದುರಾಗಿದೆ. ಎಎಪಿ ಜತೆ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕದ ದೊಡ್ಡ ವಿರೋಧ ವ್ಯಕ್ತವಾಗಿದೆ.ಈ ನಡುವೆ ದಿಲ್ಲಿ 7 ಕ್ಷೇತ್ರಗಳಲ್ಲೂ ಸ್ಪರ್ಧೆಗೆ ಸಿದ್ಧತೆ ನಡೆಸಿ ಎಂದು ಖರ್ಗೆ ಸೂಚಿಸಿದ್ದಾರೆ. ಇದರ ಬೆನ್ನಲ್ಲಿಯೇ ಮುಂಬೈನಲ್ಲಿ ನಡೆಯುವ ಸಭೆಗೆ ಬಹಿಷ್ಕರಿಸಲು ಆಪ್ ಚಿಂತನೆ ನಡೆಸಿದೆ.