ಮೊಬೈಲ್‌ ಶೋರೂಂಗೆ ನುಗ್ಗಿದ ಗೂಳಿ! ಮುಂದೇನಾಯ್ತು ನೋಡಿ

Aug 9, 2022, 8:10 PM IST

ಗೂಳಿಗಳ ನೂಕಾಟ ತಳ್ಳಾಟವನ್ನು ನೀವು ಸಾಕಷ್ಟು ನೋಡಿರಬಹುದು. ಮದವೇರಿದರಂತೂ ಗೂಳಿಗಳು ಅವಾಂತರವನ್ನೇ ಎಬ್ಬಿಸುತ್ತವೆ. ಅದೇ ರೀತಿ ಮೊಬೈಲ್ ಶೋರೂಮ್‌ ಒಂದಕ್ಕೆ ಗೂಳಿಯೊಂದು ನುಗ್ಗಿದಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಮೊಬೈಲ್ ಶೋರೂಮ್‌ ಒಂದಕ್ಕೆ ನುಗ್ಗಿದ್ದ ಗೂಳಿಯ ನೋಡಿ ಬೆದರಿದ ಮಳಿಗೆಯ ಜನ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಮೊಬೈಲ್‌ ಶೋ ರೂಮ್‌ ಒಳಗೆ ಸೀದಾ ಗ್ರಾಹಕರಂತೆ ಬಂದ ಗೂಳಿ ಅಲ್ಲಿದ್ದವರನ್ನೆಲ್ಲಾ ಓಡಿಸಿದೆ. ಅಲ್ಲದೇ ಅಲ್ಲೇ ಇದ್ದ ಟೇಬಲ್‌ ವೊಂದನ್ನು ಹಾರಿ ಮುಂದೆ ಸಾಗಲು ಯತ್ನಿಸಿದೆ. ಆದರೆ ಸಾಧ್ಯವಾಗದೇ ಅಲ್ಲೇ ಸ್ವಲ್ಪ ಕಾಲ ಹೆಣಗಾಡಿದೆ. ಹೀಗೆ ಸ್ವಲ್ಪ ಕಾಲ ಅಂಗಡಿ ಸಿಬ್ಬಂದಿಯನ್ನೆಲ್ಲಾ ಬೆದರಿಸಿದ ಗೂಳಿ ನಂತರ ನಿಧಾನವಾಗಿ ಶೋ ರೂಮ್‌ನಿಂದ ಹೊರ ನಡೆದಿದೆ.